ಹುಬ್ಬಳ್ಳಿ: ಬಾಲಕಿಯ ಮೇಲೆ ಮೂವರು ಬಾಲಕರು ಸೇರಿ ನಿರಂತರ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ ಬಾಲಕರನ್ನು ಶಹರ ಠಾಣೆ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇ ಪ್ರದೇಶದ 15 ವರ್ಷದ ಮೂವರು ಹುಡುಗರು ದೌರ್ಜನ್ಯ ಎಸಗಿದ್ದು, ಶನಿವಾರ ಬೆಳಗ್ಗೆ ನೊಂದ ಬಾಲಕಿಯ ತಾಯಿ ಮತ್ತು ತಂದೆ ದೂರು ದಾಖಲಿಸಿದ್ದಾರೆ. ಶಹರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಆಧಾರದ ಮೇಲೆ ಪರಿಶೀಲನೆ ನಡೆಸಿ ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಸದ್ಯ ಬಾಲಕಿಯನ್ನು ರಕ್ಷಣೆ ಮಾಡಿ, ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಕಳೆದ ಏಳೆಂಟು ದಿನದಿಂದ ಬಾಲಕಿಗೆ ತೊಂದರೆ ಕೊಡಲಾಗಿದೆ. ಬಾಲಕಿಯೊಂದಿಗೆ ವಿಡಿಯೋ ಮಾಡಿಕೊಂಡಿರುವ ಕುರಿತು ಮಾಹಿತಿ ಇದ್ದು, ಅದನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಾಲಕರ ಪೋಷಕರ ಬಳಿಯ ಮೊಬೈಲ್ ಅಥವಾ ಬಾಲಕರದ್ದೇ ಮೊಬೈಲ್‌ಗಳಿದ್ದು, ಅದರಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರ ಬಗ್ಗೆಯೂ ಕೂಲಂಕುಷ ತನಿಖೆ ಮಾಡಲಾಗುವುದು ಎಂದರು.























