ಬಳ್ಳಾರಿ: ಬಳ್ಳಾರಿಯ ಅವಂಬಾವಿ ಪ್ರದೇಶದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಘಟನೆ ಸಂಬಂಧ ಒಂದು ಸುಮೋಟೋ ಸೇರಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹೇಳಿದರು.
ಬಳ್ಳಾರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಪ್ರಕರಣಗಳಲ್ಲಿ ಮೂರು ಕಂಪ್ಲೇಂಟ್ ಆಗಿವೆ, ಒಂದು ಸುಮೂಟೋ ಕೇಸ್‌ನ್ನ ನಾವೇ ದಾಖಲು ಮಾಡಿಕೊಂಡಿದ್ದೇವೆ. ಅದರಲ್ಲಿ ಒಂದು ಸತ್ತವರ ಬಗ್ಗೆ ಕಂಪ್ಲೇಂಟ್ ಆಗಿದೆ. ಇನ್ನೊಂದು ವಾಲ್ಮೀಕಿ ಮಹರ್ಷಿಗಳಿಗೆ ಅವಮಾನ ಮಾಡಿದ್ರು ಅಂತಾ ಕಂಪ್ಲೇಂಟ್ ಆಗಿದೆ.
ಇನ್ನೊಂದು 307 ಕೇಸ್ ಆಗಿದೆ ಎಂದು ತಿಳಿಸಿದ್ದಾರೆ.
ವಶಕ್ಕೆ: ಪ್ರೈವೇಟ್ ಗನ್‌ಮ್ಯಾನ್‌ಗಳನ್ನು ಹಾಗೂ ಗನ್‌ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರು ಕೇವಲ ಟೀಯರ್ ಗನ್ ಫೈಯರ್ ಮಾಡಿದ್ದಾರೆ. ಐದು ಪ್ರೈವೇಟ್ ಗನ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಸಿಕ್ಕ ಬುಲೆಟ್‌ಗಳನ್ನ ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ ಎಂದು ಹಿತೇಂದ್ರ ಹೇಳಿದರು.





















