ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ಶಾಸಕರಾದ ಜನಾರ್ದನರೆಡ್ಡಿ, ಭರತರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ, ವ್ಯಕ್ತಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಬಳ್ಳಾರಿಗೆ ದೌಡಾಯಿಸಿದ್ದಾರೆ.
ಗುಂಪು ಘರ್ಷಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಎನ್ನುವವರು ಸಾವನಪ್ಪಿದ್ದು, ಬಳ್ಳಾರಿಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಸೃಷ್ಟಿಯಾಗಿದೆ.
ಹೀಗಾಗಿ ಗೃಹಮಂತ್ರಿ ಜಿ. ಪರಮೇಶ್ವರ ಸೂಚನೆ ಮೇರೆಗೆ ಎಡಿಜಿಪಿ ಆರ್.ಹಿತೇಂದ್ರ ಬಳ್ಳಾರಿಗೆ ಭೇಟಿ ನೀಡಿದ್ದು, ಘಟನೆ ಬಗ್ಗೆ ಬಳ್ಳಾರಿ ವಲಯ ಐಜಿಪಿ ವರ್ತಿಕಾ ಕಟೀಯಾರ, ಎಸ್ಪಿ ಪವನ ನೆಜ್ಜೂರು, ಬಂದೋಬಸ್ತ್‌ಗೆ ನಿಯೋಜನೆಗೊಂಡ ಚಿತ್ರದುರ್ಗ ಎಸ್ಪಿ ರಂಜಿತಕುಮಾರಿಂದ ಮಾಹಿತಿ ಪಡೆಯುತ್ತಿದ್ದಾರೆ.





















