ಹುಡುಗಿಗೆ ಬರ್ತ್‌ಡೇ ವಿಶ್‌ ಮಾಡಿದ್ದಕ್ಕೆ ಯುವಕನ ಹತ್ಯೆ

0
48

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಬರ್ತಡೇ ವಿಶ್ ಮಾಡಿದ ವಿಚಾರವೇ ಯುವಕನ ಹತ್ಯೆಗೆ ಕಾರಣವಾದ ದುರ್ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ.

ಉಡೇವಾ ಗ್ರಾಮದ ನಿವಾಸಿ ಮಂಜುನಾಥ್ (28) ಎಂಬ ಯುವಕ ಚಾಕು ಇರಿತದಿಂದ ಕೊಲೆಯಾದ ದುರ್ದೈವಿಯಾಗಿದ್ದಾನೆ. ಮೃತ ಮಂಜುನಾಥ್ ಸೋಶಿಯಲ್ ಮೀಡಿಯಾ ಮೂಲಕ ಓರ್ವ ಯುವತಿಗೆ ಜನ್ಮದಿನದ ವಿಶ್ ಮಾಡಿದ್ದನು. ಆದರೆ ಆ ಯುವತಿಯ ವಿವಾಹ ನಿಶ್ಚಯ ಈಗಾಗಲೇ ವೇಣು ಎಂಬ ಯುವಕನೊಂದಿಗೆ ನಡೆದಿತ್ತು. ಈ ವಿಚಾರದಿಂದ ಕೋಪಗೊಂಡ ಸ್ನೇಹಿತರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಒಂದು ಸಂದೇಶವೇ ಜೀವ ಕಳೆದುಕೊಳ್ಳುವ ಮಟ್ಟಿಗೆ ತಲುಪಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.

Previous articleಬೈಕ್ ಅಪಘಾತ: ಮಾನವೀಯತೆ ಮೆರೆದ ನಿವೃತ್ತ ತಹಶೀಲ್ದಾರ್
Next articleಮಾನ್ಯಾ ಹೆಸರಲ್ಲಿ ಕಠಿಣ ಕಾನೂನಿಗೆ ಚಿಂತನೆ