ಅಲಿಗದ್ದ ಕಡಲತೀರದಲ್ಲಿ ಸ್ವಚ್ಛತಾ ಪಖ್ವಾಡಾ ಅಭಿಯಾನ ಯಶಸ್ವಿ

0
1

ದಾಂಡೇಲಿ: ಕಾರವಾರ ಪ್ರಾದೇಶಿಕ ಕೇಂದ್ರದ ಐಸಿಎಆರ್ – ಸಿಎಂಎಫ್‌ಆರ್‌ಐ ಕಾರವಾರ ಪ್ರಾದೇಶಿಕ ಕೇಂದ್ರದ ವತಿಯಿಂದ ಅಲಿಗದ್ದಾ ಕಡಲತೀರದಲ್ಲಿ ಕರಾವಳಿ ಸ್ವಚ್ಛತಾ ಪಖ್ವಾಡಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಅಲಿಗದ್ದಾ ಕಡಲತೀರವನ್ನು ಸಮುದ್ರ ಕಸ, ಜಲಚರಗಳ ಮೇಲೆ ಮ್ಯಾಕ್ರೋ ಮತ್ತು ಮೈಕ್ರೋಪ್ಲಾಸ್ಟಿಕ್‌ಗಳ ಅಪಾಯಕಾರಿ ಪರಿಣಾಮಗಳು, ಪ್ಲಾಸ್ಟಿಕ್ ಮಾಲಿನ್ಯ, ವಾತಾವರಣ ಮತ್ತು ಮಾನವ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರವಾರ ಕರಾವಳಿಯ ಕಡಲತೀರಗಳನ್ನು ರಕ್ಷಿಸಲು ಜಾಗೃತಿ ಅಭಿಯಾನ ಮತ್ತು ಫಲಕಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಒಟ್ಟು 120 ಕೆಜಿ ಸಮುದ್ರ ಕಸ (ಪ್ಲಾಸ್ಟಿಕ್ ಕಸದ 86.8%) ಹಾಗೂ ಹರಿದ ಮೀನುಗಾರಿಕಾ ಬಲೆಗಳನ್ನು ಕಡಲತೀರದಿಂದ ತೆಗೆದುಹಾಕಲಾಯಿತು.

ಸಾರ್ವಜನಿಕರು ಮತ್ತು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಸಿಬ್ಬಂದಿ ಸೇರಿದಂತೆ 40ಕ್ಕೂ ಹೆಚ್ಚು ಸ್ವಯಂಸೇವಕರು ಈ ಕರಾವಳಿ ಸ್ವಚ್ಛತಾ ಪಖ್ವಾಡಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಐಸಿಎಆರ್-ಸಿಎಂಎಫ್‌ಆರ್‌ಐನ ಕಾರವಾರ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಕಾಳಿದಾಸ ಸಿ.ಕಾರ್ಯಕ್ರಮ ಸಂಯೋಜಿಸಿದರು.

Previous articleಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ