ಬೆಳಗಾವಿ: ಜೈಲಿನ ಆವರಣಕ್ಕೆ ದುಷ್ಕರ್ಮಿಗಳು ಡ್ರಗ್ಸ್, ಮೊಬೈಲ್ ಎಸೆದು ಪರಾರಿಯಾದ ಘಟನೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ದುಷ್ಕರ್ಮಿಗಳು ಹೊರಗೆ ನಿಂತುಕೊಂಡೇ ಜೈಲಿನ ಆವರಣದೊಳಗೆ ಮೊಬೈಲ್, ಸಿಮ್ ಕಾರ್ಡ್, ಮಾದಕ ವಸ್ತುಗಳನ್ನು ಎಸೆದಿದ್ದಾರೆ ಎಂದು ತಿಳಿದಿ ಬಂದಿದೆ.
ಹಿಂಡಲಗಾ ಜೈಲಿನ ಬಳಿ ಮುಂಜಾನೆ 3 ಗಂಟೆಗೆ ಘಟನೆ ನಡೆದಿದೆ. ಜೈಲಿನ ಸಿಸಿಟಿವಿಯಲ್ಲಿ ಕೀಡಿಗೇಡಿಗಳ ಕೃತ್ಯ ಸೆರೆಯಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.























