ದಕ್ಷಿಣ ಮೆಕ್ಸಿಕೋದಲ್ಲಿ ರೈಲು ದುರಂತ: 13 ಸಾವು, 98 ಜನರಿಗೆ ಗಾಯ

0
4

ಮೆಕ್ಸಿಕೋ ಸಿಟಿ: ದಕ್ಷಿಣ ಮೆಕ್ಸಿಕೋದ ಓಕ್ಸಾಕ (Oaxaca) ರಾಜ್ಯದಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ. ಈ ಕುರಿತು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಲೀನಾ ಕ್ರೂಜ್ ಬಂದರುನಿಂದ ಗಲ್ಫ್ ಕರಾವಳಿಯ ಕೋಟ್ಜಾಕೋಲ್ಕೋಸ್‌ಗೆ ತೆರಳುತ್ತಿದ್ದ ಇಂಟರ್ ಓಷಿಯಾನಿಕ್ ರೈಲಿನಲ್ಲಿ ಒಂಬತ್ತು ಸಿಬ್ಬಂದಿ ಸೇರಿದಂತೆ ಒಟ್ಟು 250 ಜನರು ಪ್ರಯಾಣಿಸುತ್ತಿದ್ದರು. ನಿಜಾಂಡಾ ಪಟ್ಟಣದ ಸಮೀಪ ರೈಲು ಸಾಗುತ್ತಿದ್ದ ವೇಳೆ ಏಕಾಏಕಿ ಹಳಿ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಟಾಟಾನಗರ್–ಎರ್ನಾಕುಲಂ ಎಕ್ಸ್‌ಪ್ರೆಸ್‌ಗೆ ಬೆಂಕಿ: ಎರಡು ಬೋಗಿಗಳಿಗೆ ಬೆಂಕಿ, ಓರ್ವ ಮೃತ್ಯು

ಅಪಘಾತದ ನಂತರ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದುವರೆಗೆ 36 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, 193 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಘಟನೆಯ ಕುರಿತು ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಅಗತ್ಯ ನೆರವು ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಈ ಅಪಘಾತದ ನಿಖರ ಕಾರಣ ತಿಳಿಯಲು ಮೆಕ್ಸಿಕೋದ ಅಟಾರ್ನಿ ಜನರಲ್ ಕಚೇರಿ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಅಪಘಾತಕ್ಕೀಡಾದ ಇಂಟರ್ ಓಷಿಯಾನಿಕ್ ರೈಲು ಯೋಜನೆ 2023ರಲ್ಲಿ ಉದ್ಘಾಟನೆಯಾಗಿದ್ದು, ಇದು ಮೆಕ್ಸಿಕೋದ ಮಹತ್ವಾಕಾಂಕ್ಷೆಯ ಇಂಟರ್ ಓಷಿಯಾನಿಕ್ ಕಾರಿಡಾರ್ ಯೋಜನೆಯ ಪ್ರಮುಖ ಭಾಗವಾಗಿದೆ. ಈ ರೈಲು ಪೆಸಿಫಿಕ್ ಕರಾವಳಿಯ ಸಲೀನಾ ಕ್ರೂಜ್ ಬಂದರನ್ನು ಗಲ್ಫ್ ಕರಾವಳಿಯ ಕೋಟ್ಜಾಕೋಲ್ಕೋಸ್‌ಗೆ ಸಂಪರ್ಕಿಸುವ ಉದ್ದೇಶ ಹೊಂದಿದ್ದು, ವಾಣಿಜ್ಯ ಮತ್ತು ಪ್ರಯಾಣಿಕರ ಸಾರಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

Previous articleಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ನಡೆಸುತ್ತಿರುವವರ ಒಕ್ಕಲೆಬ್ಬಿಸದಂತೆ ಡಿ.ಕೆ.ಶಿವಕುಮಾರ ಸೂಚನೆ