ಕಲಬುರಗಿ: ರಾಜ್ಯದಲ್ಲಿ 545 ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ವಿರುದ್ಧ ಫರಹತಾಬಾದ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಶನಿವಾರ ಸಂಜೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಜೈಲು ತಪಾಸಣೆಗೆ ಹೋಗಿದ್ದ ಸಿಬ್ಬಂದಿ ಜತೆ ಕಿರಿಕ್ ಮಾಡಿಕೊಂಡಿದ್ದು, ಬ್ಯಾರಕ್ ತಪಾಸಣೆಗೆ ಬಂದಿದ್ದ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಆ ವೇಳೆ ಸಿಬ್ಬಂದಿ ಜೊತೆ ತಗಾದೆ ತೆಗೆದು, ನನ್ನ ಬ್ಯಾರಕ್ ತಪಾಣೆಗೆ ಅನುಮತಿ ಇದ್ದಿಯಾ ಎಂದು ಪ್ರಶ್ನಿಸಿದ್ದಾನೆ.
ಅನುಮತಿ ಇಲ್ಲದೇ ಬ್ಯಾರಕ್ ತಪಾಸಣೆಗೆ ಬಿಡಲ್ಲ ಎಂದು ವಾಗ್ವಾದಕ್ಕಿಳಿದ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕಿ ಡಾ. ಅನಿತಾ ಆರ್. ಅವರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ. ಇತ್ತೀಚೆಗಷ್ಟೇ ಮತ್ತೆ ಜೈಲು ಸೇರಿದ ಮೇಲೆ ವಿವಾದ ಮೈಮೇಲೆ ಎಳೆದುಕೊಂಡು ಮತ್ತೆ ಸುದ್ದಿಯಾಗಿದ್ದಾನೆ.























