ಒಂದೇ ತಿಂಗಳಲ್ಲಿ ಫಲ ನೀಡಿದ ಮಹತ್ವಾಕಾಂಕ್ಷಿ ‘ಕ್ಷೀರ’ ಯೋಜನೆ

0
2

ವಿಜಯಪುರ: ವಿಜಯಪುರ ಜಿಲ್ಲೆಯ ರೈತರು ಹಾಗೂ ಹಾಲು ಉತ್ಪಾದಕರನ್ನು ಕೇವಲ ಉತ್ಪಾದಕರ ಮಟ್ಟದಲ್ಲೇ ನಿಲ್ಲಿಸದೇ, ಹೈನು ಉದ್ಯಮಿಗಳಾಗಿ ರೂಪಿಸುವ ಮಹತ್ವಾಕಾಂಕ್ಷೆಯಿಂದ ಲೋಕಾರ್ಪಣೆಗೊಂಡ ‘ಕ್ಷೀರ’ ಯೋಜನೆ ಒಂದೇ ತಿಂಗಳೊಳಗೆ ಸ್ಪಷ್ಟ ಫಲಿತಾಂಶ ನೀಡಲು ಆರಂಭಿಸಿರುವುದು ಜಿಲ್ಲೆಯ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ನೀರಾವರಿ ಯೋಜನೆಗಳ ಸಮರ್ಪಕ ಬಳಕೆ, ಸುಸ್ಥಿರ ಹೈನುಗಾರಿಕೆ ಹಾಗೂ ತಾಂತ್ರಿಕ ನೆರವಿನ ಮೂಲಕ ರೈತರು, ಮಹಿಳೆಯರು ಮತ್ತು ಯುವಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಈ ಯೋಜನೆಯ ಹಿಂದಿದ್ದು, ಈಗಾಗಲೇ ಅದರ ಪ್ರಾಯೋಗಿಕ ಯಶಸ್ಸು ಕಾಣಿಸುತ್ತಿದೆ. ‘ಕ್ಷೀರ’ ಯೋಜನೆ ಜಿಲ್ಲೆಯ ಹೈನುಗಾರಿಕೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಸಮಗ್ರ ಚಳವಳಿಯಾಗಿ ರೂಪುಗೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕ್ಷೀರ’ ಯೋಜನೆಯಿಂದ ಹಾಲಿನ ಹೊಳೆ ಹರಿವು ಆರಂಭ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ

ರೈತರಿಂದ ಉದ್ಯಮಿಗಳತ್ತ ಪಯಣ: ಈ ಯೋಜನೆಯ ಪ್ರಮುಖ ಗುರಿ ರೈತರನ್ನು ಕೇವಲ ಹಾಲು ಉತ್ಪಾದಕರಾಗಿ ಸೀಮಿತಗೊಳಿಸದೇ, ಮೌಲ್ಯವರ್ಧಿತ ಹೈನು ಉತ್ಪನ್ನಗಳ ಮೂಲಕ ಉದ್ಯಮಶೀಲತೆಯತ್ತ ಕರೆದೊಯ್ಯುವುದು. ಹಾಲು ಸಂಗ್ರಹ, ಶೀತಲೀಕರಣ, ಸಂಸ್ಕರಣೆ, ಮಾರುಕಟ್ಟೆ ಸಂಪರ್ಕ ಹಾಗೂ ಆದಾಯ ವೃದ್ಧಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲಾಗುತ್ತಿದೆ.

ಮಹಿಳೆಯರು ಮತ್ತು ಯುವಕರಿಗೆ ಹೊಸ ಅವಕಾಶ: ‘ಕ್ಷೀರ’ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಗ್ರಾಮೀಣ ಯುವಕರನ್ನು ಹೈನು ಉದ್ಯಮಕ್ಕೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಲು ಉತ್ಪಾದನೆ ಜೊತೆಗೆ ಮೊಸರು, ತುಪ್ಪ, ಬೆಣ್ಣೆ, ಪನೀರ್ ಮುಂತಾದ ಉತ್ಪನ್ನಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತಿದ್ದು, ಇದು ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ.

ಇದನ್ನೂ ಓದಿ: KSDL-ಕೃಷಿ ಮಾರಾಟ ಇಲಾಖೆ ನೇಮಕಾತಿ ಪರೀಕ್ಷೆ ದಿನಾಂಕ ಬದಲಾವಣೆ

ಸುಸ್ಥಿರ ಹೈನುಗಾರಿಕೆಗೆ ಬಲ: ನೀರಾವರಿ ಸೌಲಭ್ಯಗಳೊಂದಿಗೆ ಹಸಿರು ಮೇವು ಉತ್ಪಾದನೆ, ಪಶು ಆರೋಗ್ಯ ಸೇವೆಗಳು, ವೈಜ್ಞಾನಿಕ ಸಾಕಾಣಿಕೆ ವಿಧಾನಗಳು ಹಾಗೂ ತಂತ್ರಜ್ಞಾನ ಆಧಾರಿತ ನಿರ್ವಹಣೆಯ ಮೂಲಕ ಸುಸ್ಥಿರ ಹೈನುಗಾರಿಕೆಗೆ ಬಲ ನೀಡಲಾಗುತ್ತಿದೆ. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗಿದ್ದು, ರೈತರ ಆದಾಯದಲ್ಲೂ ಗಣನೀಯ ಏರಿಕೆ ಕಂಡುಬರುತ್ತಿದೆ.

ಜಿಲ್ಲೆಯ ಆರ್ಥಿಕತೆಗೆ ಹೊಸ ಚೈತನ್ಯ: ಒಂದೇ ತಿಂಗಳಲ್ಲೇ ಹಾಲು ಸಂಗ್ರಹ ಪ್ರಮಾಣ ಹೆಚ್ಚಳವಾಗಿರುವುದು, ರೈತರಲ್ಲಿ ವಿಶ್ವಾಸ ಮೂಡಿಸಿರುವುದು ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿರುವುದು ‘ಕ್ಷೀರ’ ಯೋಜನೆಯ ಯಶಸ್ಸಿನ ಮೊದಲ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ವಿಜಯಪುರ ಜಿಲ್ಲೆಯನ್ನು ಹೈನುಗಾರಿಕಾ ಕ್ರಾಂತಿಯ ಕೇಂದ್ರವನ್ನಾಗಿ ರೂಪಿಸುವ ಸಾಧ್ಯತೆ ಇದೆ.

Previous articleತ್ರಿಭಾಷೆಯಲ್ಲಿ ಯಾಕೋ… ಹಾಡು ಬಿಡುಗಡೆ: ಟ್ರೆಂಡಿಂಗ್‌ನಲ್ಲಿ ‘ಅಶೋಕ’ನ ಮಿಂಚು