ವೇಶ್ಯೆಯರಂತೆ ಮಾರಾಟವಾದ ಶಾಸಕರು: ಬಿ.ಕೆ. ಹರಿಪ್ರಸಾದ್

0
23
b k hariprasad

ಹೊಸಪೇಟೆ: ರಾಜ್ಯದ ಜನರು ೨೦೧೮ರಲ್ಲಿ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿದ್ದರು. ಆದರೆ ಕೆಲವರು ವೇಶ್ಯೆಯ ಮಾದರಿಯಲ್ಲಿ ತಮ್ಮ ಸ್ಥಾನಗಳನ್ನು ಮಾರಾಟ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ನಗರದ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪ್ರತಿಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸಮಿಶ್ರ ಸರ್ಕಾರ ರಚಿಸಿದ್ದೆವು. ಆದರೆ, ವೇಶ್ಯೆಯರು ಹೊಟ್ಟೆಪಾಡಿಗಾಗಿ ಮಾರಿಕೊಂಡಂತೆ, ಕೆಲ ಶಾಸಕರು ತಮ್ಮ ಸ್ಥಾನಗಳನ್ನು ಮಾರಾಟ ಮಾಡಿಕೊಂಡರು. ಇವರಿಗೆ ರಾಜ್ಯದ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

Previous articleಟವರ್ ಏರಿದ ಮಾನಸಿಕ ಅಸ್ವಸ್ಥ
Next articleಶಿವಸೇನೆ ಸಂಸದರಿಗೆ ಗಡಿ ಪ್ರವೇಶಕ್ಕೆ ನಿರ್ಬಂಧ