ಡಿಕೆಶಿ ವಿಚಾರದಲ್ಲಿ ನಮ್ಮದು ತಟಸ್ಥ ನಿಲುವು

0
1

ಬಾಗಲಕೋಟೆ: ಸಿಎಂ ಬದಲಾವಣೆ ವಿಚಾರ, ಡಿ.ಕೆ. ಶಿವಕುಮಾರ ಅವರ ಪ್ರಯತ್ನದ ವಿಚಾರದಲ್ಲಿ ನಾನೇನೂ ಹೇಳವುದಿಲ್ಲ. ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ನಾವು ತಟಸ್ಥವಾಗಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಮಂಗಳವಾರ ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಡಿಕೆಶಿ ದೆಹಲಿ ಪ್ರಯಾಣ ವ್ಯರ್ಥ ಪ್ರಯತ್ನವಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆಶಿ ಅವರ ದೆಹಲಿ ಭೇಟಿ, ಸಂಘಟನೆಯ ಚರ್ಚೆ ಇದ್ದೇ ಇರುತ್ತದೆ. ಸರ್ಕಾರ ಇದೆ ಹೋಗಲೇಬೇಕಾಗುತ್ತದೆ ಎಂದರು.

ಹೈಕಮಾಂಡ್ ತಮ್ಮ ಪರವಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ, ಸಿಎಂ ಅನೇಕ ಬಾರಿ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಕೆ.ಎನ್. ರಾಜಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಸರಣಿ ಪತ್ರ ಬರೆದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸಹ ಈ ಹಿಂದೆಯೇ ಹೇಳಿದ್ದೆವು, ಅವರು ದೆಹಲಿಗೆ ತೆರಳಿ ಹೈಕಮಾಂಡ್ ಮನವೊಲಿಸಬೇಕೆಂದು. ಈಗ ಅವರು ಪತ್ರಮುಖೇನ ಮಾಡುತ್ತಿರಬಹುದು ಎಂದು ಹೇಳಿದರು.

ಸಿಡಬ್ಲೂಸಿ ಸಭೆಗೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡದಿರುವ ಬಗ್ಗೆ ಪ್ರಶ್ನೆಗೆ, ಆಹ್ವಾನ ಇದ್ದರೆ ಹೋಗುತ್ತಿದ್ದರು; ಇಲ್ಲ ಎಂದರೆ ಹೋಗುವುದಿಲ್ಲ ಎಂದು ನಕ್ಕು ಸುಮ್ಮನಾದರು.

Previous articleರಾಜ್ಯ ಕಾಂಗ್ರೆಸ್ಸಿನಲ್ಲಿ ಭಿನ್ನಾಭಿಪ್ರಾಯಗಳಿಲ್ಲ