ಗದಗ(ಲಕ್ಷ್ಮೇಶ್ವರ): ಅಣ್ಣನ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದ ತಮ್ಮನಿಗೆ ಮರಣಪತ್ರದಲ್ಲಿ ತಮ್ಮನ ಹೆಸರೇ ನಮೂದಿಸಿ ಪ್ರಮಾಣಪತ್ರ ನೀಡಿದ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ.
ಪಟ್ಟಣದ ಅಶೋಕ ಮಹಾದೇವಪ್ಪ ಹಂಪಣ್ಣವರ ಎಂಬ ವ್ಯಕ್ತಿಯೋರ್ವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಮರಣ ಪ್ರಮಾಣಪತ್ರ ನೀಡುವಂತೆ ಸಹೋದರ ನಾಗರಾಜ ಮಹಾದೇವಪ್ಪ ಹಂಪಣ್ಣವರ ಪಟ್ಟಣದ ಪುರಸಭೆಯ ಜನನ ಮತ್ತು ಮರಣ ಅಧಿಕಾರಿಗಳಿಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ತೀವ್ರ ಹೊಟ್ಟೆನೋವು; ಸರ್ಕ್ಯೂಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆದ ಸಿಎಂ
ಪುರಸಭೆಯ ಅಧಿಕಾರಿಯು ಅರ್ಜಿ ನೀಡಿದ ವ್ಯಕ್ತಿಯನ್ನೇ ಕಾಯಿಲೆಯಿಂದ ಮರಣ ಹೊಂದಿದ್ದಾನೆ ಎಂದು ನೋಂದಣಿ ಮಾಡಿ ಪ್ರಮಾಣಪತ್ರ ನೀಡಿದ್ದಾರೆ. ಈಗ ದಾಖಲೆ ತಿದ್ದುಪಡಿಗೆ ತಮ್ಮ ಅಲೆದಾಡುವಂತಾಗಿದೆ.









