Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಕುರ್ಚಿ ಬದಲಾಗುವವರೆಗೂ ಡಿನ್ನರ್ ಪಾಲಿಟಿಕ್ಸ್!

ಕುರ್ಚಿ ಬದಲಾಗುವವರೆಗೂ ಡಿನ್ನರ್ ಪಾಲಿಟಿಕ್ಸ್!

0
68

ಬೆಳಗಾವಿ: ಕಾಂಗ್ರೆಸ್‌ನಲ್ಲಿ ಆಡಳಿತದ ಮೇಲೆ ನಿಯಂತ್ರಣ ಇಲ್ಲದಾಗಿದ್ದು, ಎಲ್ಲಿಯ ವರೆಗೆ ಕುರ್ಚಿ ಬದಲಾಗುವುದಿಲ್ಲವೋ ಅಲ್ಲಿಯ ವರೆಗೆ ಇದು ನಿಲ್ಲುವುದಿಲ್ಲ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಟ್ಟಿಯಾಗಿದ್ದಾರೆ. ಅವರು ತಂತ್ರಗಾರಿಕೆ ಮಾಡುತ್ತಲೇ ಇರುತ್ತಾರೆ. ಆದರೆ, ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಫೋಟೋ ಕಾಣುತ್ತಲ್ಲ. ಕೇವಲ ಡಿ.ಕೆ. ಶಿವಕುಮಾರ ಅವರ ಫೋಟೋ ಕಾಣಿಸುತ್ತಿವೆ. ಇಲ್ಲಿ ಡಿನ್ನರ್ ಪಾಲಿಟಿಕ್ಸ್ ಜೋರಾಗಿ ನಡೆದಿದ್ದು, ಅದು ಕುರ್ಚಿ ಬದಲಾದಾಗ ನಿಲ್ಲಲಿದೆ ಎಂದರು.

‌ಇದನ್ನೂ ಓದಿ: ಡಿಕೆಶಿ‌ ಬಿಜೆಪಿಗೆ ಕರೆತರುವ ಪ್ರಯತ್ನ ನಡೆದಿತ್ತು: ಯತ್ನಾಳ ಹೊಸ ಬಾಂಬ್

ಪ್ರತ್ಯೇಕ ಉತ್ತರ ಕರ್ನಾಟಕದ ಕುರಿತು ಕಾಗೆ ಹೇಳಿಕೆಗೆ ಉತ್ತರಿಸಿ, ನಮ್ಮದು ಅಖಂಡ ಕರ್ನಾಟಕವಾಗಿದೆ. ಎಲ್ಲರೂ ಸೇರಿ ಅಭಿವೃದ್ಧಿ ಮಾಡಬೇಕು. ಜೊತೆಗೆ ಕುಳಿತು ಮಾತನಾಡಿ ಅಭಿವೃದ್ಧಿ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದರು.

Previous articleನನ್ನ ಷರತ್ತು ಒಪ್ಪಿದರೆ ಮಾತ್ರ ಬಿಜೆಪಿಗೆ ಹೋಗುವೆ: ಯತ್ನಾಳ್
Next articleಬೂಸಾ ತರಲು ಹೋಗಿ ಸಾವಿಗೀಡಾದ ಸಹೋದರರು