Home ಸುದ್ದಿ ದೇಶ 2027ರ ದೇಶವ್ಯಾಪಿ ಡಿಜಿಟಲ್ ಜನಗಣತಿಗೆ ಕೇಂದ್ರ ಮಂಜೂರು

2027ರ ದೇಶವ್ಯಾಪಿ ಡಿಜಿಟಲ್ ಜನಗಣತಿಗೆ ಕೇಂದ್ರ ಮಂಜೂರು

0
12

₹11,718 ಕೋಟಿ ಅನುದಾನಕ್ಕೆ ಸಚಿವ ಸಂಪುಟ ಅನುಮೋದನೆ

ನವದೆಹಲಿ: ದೇಶದಾದ್ಯಂತ 2027ರಲ್ಲಿ ನಡೆಯಲಿರುವ ಜನಗಣತಿಗೆ ಕೇಂದ್ರ ಸರ್ಕಾರ ಭಾರೀ ಬಜೆಟ್‌ನ್ನು ಬಿಡುಗಡೆ ಮಾಡಿದೆ. ₹11,718 ಕೋಟಿ ಅನುದಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಭಾರತದ ಮೊದಲ ಪೂರ್ಣ ಪ್ರಮಾಣದ ಡಿಜಿಟಲ್ ಜನಗಣತಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ 2027ರ ಜನಗಣತಿ ಭಾರತದ ಇತಿಹಾಸದಲ್ಲೇ ಮೊದಲ ಡಿಜಿಟಲ್ ಜನಗಣತಿ ಎಂದು ಘೋಷಿಸಿದರು. ಡಿಜಿಟಲ್ ತಂತ್ರಜ್ಞಾನದ ಬಳಕೆ ಮೂಲಕ ದತ್ತಾಂಶ, ಸುರಕ್ಷಿತ ಹಾಗೂ ಪಾರದರ್ಶಕ ಗಣತಿ ನಡೆಯುವುದನ್ನು ಉದ್ದೇಶಿಸಲಾಗಿದೆ. ದತ್ತಾಂಶ ಸಂರಕ್ಷಣೆಗೆ ಅತ್ಯುನ್ನತ ಮಟ್ಟದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಎರಡು ಹಂತಗಳಲ್ಲಿ ಗಣತಿ: ಮನೆಪಟ್ಟಿಯಿಂದ ಜನ ಗಣತಿವರೆಗೆ ಜನಗಣತಿಯನ್ನು ಹೀಗೆ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ

ಮೊದಲ ಹಂತದ ಜನಗಣತಿ: ಮೊದಲ ಹಂತದ ಜನಗಣತಿಯಲ್ಲಿ ಮನೆ ಪಟ್ಟಿ & ವಸತಿ ಗಣತಿ 2026ರ ಏಪ್ರಿಲ್ – ಸೆಪ್ಟೆಂಬರ್ 2026 ರಲ್ಲಿ ದೇಶದ ಎಲ್ಲಾ ಮನೆಗಳ ರಿಜಿಸ್ಟರ್, ವಸತಿ ಸೌಲಭ್ಯಗಳು ಮತ್ತು ಮೂಲಭೂತ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ಎರಡನೇ ಹಂತದ ಜನ ಗಣತಿ: ಫೆಬ್ರವರಿ 2027 ವ್ಯಕ್ತಿಗತ ಹಾಗೂ ಕುಟುಂಬ ಮಟ್ಟದ ಜನಸಂಖ್ಯಾ ಮಾಹಿತಿ ಸಂಗ್ರಹಣೆ ನಡೆಯಲಿದೆ. 3 ಲಕ್ಷ ಸಿಬ್ಬಂದಿ ನೇಮಕ—ಮುನ್ನೆಚ್ಚರಿಕೆಯ ಸೂಚನೆ ಈಗಾಗಲೇ ಜಾರಿಯಲ್ಲಿದೆ. ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯ (RGI) ಈಗಾಗಲೇ ಎಲ್ಲ ರಾಜ್ಯ ಮತ್ತು ಯುಟಿ‌ಗಳಿಗೆ ನಿರ್ದೇಶನ ನೀಡಿ ಜನಗಣತಿ ಕಾರ್ಯಾಚರಣೆಗೆ ಅಗತ್ಯವಿರುವ 3 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯ ನೇಮಕಾತಿ ಜನವರಿ 15ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹ ನೀಡಲು ಮನವಿ

ಜನಗಣತಿಯ ಮಹತ್ವ: ಅಭಿವೃದ್ಧಿ ಯೋಜನೆಗಳ ಹೃದಯಬಿಂದು ಜನಸಂಖ್ಯೆ, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ, ವಲಸೆ ಹಾಗೂ ಸಾಮಾಜಿಕ-ಆರ್ಥಿಕ ಸ್ಥಿತಿಯ ಒಳನೋಟಗಳನ್ನು ನೀಡುವ ಇದು ರಾಷ್ಟ್ರದ ಅಭಿವೃದ್ಧಿ ಯೋಜನೆಗಳ ಮೂಲ ಆಧಾರ. ಡಿಜಿಟಲ್ ವಿಧಾನವು ಖಚಿತತೆ, ವೇಗ ಮತ್ತು ದತ್ತಾಂಶದ ನಿಖರತೆಯನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

2027ರ ಜನಗಣತಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ತಿರುವು ತರುವ ನಿರೀಕ್ಷೆಯಿದ್ದು, ಡಿಜಿಟಲ್ ಪರಿವರ್ತನೆಯ ದಿಕ್ಕಿನಲ್ಲಿ ಭಾರತದ ಮನ್ನಣೆ ಪಡೆಯುವ ಪ್ರಮುಖ ಹೆಜ್ಜೆಯಾಗಿದೆ.

ಇದನ್ನೂ ಓದಿ: ಗುಡ್‌ನ್ಯೂಸ್‌: ಶೀಘ್ರದಲ್ಲಿಯೇ 24,300 ಹುದ್ದೆಗಳ ಭರ್ತಿ