ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಹೊಸ ಮಾರ್ಗಸೂಚಿ

0
4

ಸಣ್ಣ ಗ್ರಾಮಗಳಿಗೆ ಉಪ ಕೇಂದ್ರಗಳೂ — ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ

ಬೆಳಗಾವಿ (ಸುವರ್ಣಸೌಧ): ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ರಕ್ಷಣಾ ಸಚಿವ ಕೆ.ಎಚ್. ಮುನಿಯಪ್ಪ ಅವರು, ರಾಜ್ಯದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನ್ಯಾಯಬೆಲೆ ಅಂಗಡಿಗಳ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ನಿಯಮ 2016ರ ಕಲಂ 6 ಪ್ರಕಾರ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಅವಕಾಶವಿದ್ದು, ಅಗತ್ಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಣ್ಣ ಗ್ರಾಮಗಳಿಗೆ ಉಪಕೇಂದ್ರ – ಪಡಿತರಕ್ಕೆ ಸುಲಭ ಪ್ರವೇಶ: ಒಂದು ಗ್ರಾಮದಲ್ಲಿ ಪಡಿತರ ಚೀಟಿದಾರರ ಸಂಖ್ಯೆ ಕಡಿಮೆ ಇದ್ದರೂ, ಅವರಿಗೆ ದೂರ ಪ್ರಯಾಣದ ತೊಂದರೆ ಆಗದಂತೆ ನ್ಯಾಯಬೆಲೆ ಅಂಗಡಿ ವರ್ತಕರಿಗೆ ಗ್ರಾಮಗಳಲ್ಲಿಯೇ ‘ಉಪ ಕೇಂದ್ರ’ ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಗ್ರಾಮಸ್ಥರಿಗೆ ಆಹಾರ ಧಾನ್ಯ ವಿತರಣೆಯಲ್ಲಿ ವಿಳಂಬ ಹಾಗೂ ಅಸೌಕರ್ಯಗಳ ಸಾಧ್ಯತೆ ಕಡಿಮೆಯಾಗಲಿದೆ.

ಇದನ್ನೂ ಓದಿ: ಶಿರಡಿ ಸಾಯಿಬಾಬಾ ಸನ್ನಿಧಿಗೆ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ

ಹೊಸ ಅಂಗಡಿ ಮಂಜೂರಾತಿ—ಜನಸಂಖ್ಯೆ ಆಧಾರಿತ ನಿರ್ಧಾರ: ರಾಜ್ಯದ ಎಲ್ಲಡೆ ಪಡಿತರ ಚೀಟಿಗಳ ಸಂಖ್ಯೆಯನ್ನು ಆಧಾರವಾಗಿ ತೆಗೆದುಕೊಂಡು ಅಗತ್ಯವಿದ್ದಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗುತ್ತದೆ. ಪಡಿತರ ವಿತರಣೆಯ ಭಾರ ಹೆಚ್ಚಾದ ಪ್ರದೇಶಗಳಲ್ಲಿ ಮಂಜೂರಾತಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

SC/ST ಸಮುದಾಯಗಳಿಗೆ ವಿಶೇಷ ಆದ್ಯತೆ — ಅಧಿಸೂಚನೆ ಹೊರಡಿಸಿದ ಸರ್ಕಾರ: ಮುಖ್ಯವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ನ್ಯಾಯಬೆಲೆ ಅಂಗಡಿ ಪ್ರದೇಶಗಳಲ್ಲಿ ಅಲ್ಲಿ ಜನಸಂಖ್ಯೆ 40%ಕ್ಕಿಂತ ಹೆಚ್ಚು ಇದ್ದಲ್ಲಿ, ಹೊಸ ನ್ಯಾಯಬೆಲೆ ಅಂಗಡಿಗಳನ್ನು ನೀಡುವಾಗ ಆ ಸಮುದಾಯದವರಿಗೇ ಆದ್ಯತೆ ನೀಡಲಾಗುವುದು. ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ: ರಜನಿಕಾಂತ್ 75ನೇ ಹುಟ್ಟುಹಬ್ಬ: ಹೊಸ ರೂಪದಲ್ಲಿ ಪಡೈಯಪ್ಪ ಮಿಂಚು

ಅದರ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ: SC/ST ಸಂಘಟನೆಗಳು ಅಥವಾ ಸಮುದಾಯದ ಖಾಸಗಿ ವ್ಯಕ್ತಿಗಳಿಗೆ ಮೀಸಲಾತಿ ಅನುಸರಿಸಿ ಹೊಸ ಅಂಗಡಿ ಮಂಜೂರಾತಿಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದೆ.

‘ಅನ್ನ ಸುವಿಧಾ ಯೋಜನೆ’,: ಇದು ರಾಜ್ಯದ 75 ವರ್ಷ ಮೇಲ್ಪಟ್ಟ ಒಂಟಿ ಹಿರಿಯರಿಗೆ ‘ಅನ್ನ ಸುವಿಧಾ’ ಮೂಲಕ ಮನೆಬಾಗಿಲಿಗೆ ಪಡಿತರ ಕುರಿತಂತೆ ಮತ್ತೊಂದು ಮಹತ್ವದ ಯೋಜನೆಯನ್ನು ವಿವರಿಸಿದರು. ಮನೆಯಲ್ಲೇ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರಿಗೆ ಪಡಿತರ ಸಾಮಗ್ರಿಗಳನ್ನು ನೇರವಾಗಿ ಅವರ ಮನೆ ಬಾಗಿಲಿಗೆ ತಲುಪಿಸುವ ಕಲ್ಯಾಣ ಯೋಜನೆ. ಈ ಯೋಜನೆ ಈಗಾಗಲೇ ಜಾರಿಯಲ್ಲಿದ್ದು, ಹಿರಿಯರು ಅಂಗಡಿಗೆ ಬರುವ ತೊಂದರೆ ಎದುರಿಸದಂತೆ ಮಾಡಲಾಗಿದೆ.

ಜನಕಲ್ಯಾಣದತ್ತ ಸರ್ಕಾರದ ಬದ್ಧತೆ: ನ್ಯಾಯಬೆಲೆ ಅಂಗಡಿಗಳ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಸುಧಾರಣೆ ಮಾಡಿ ಪಡಿತರ ವಿತರಣೆಯ ಪಾರದರ್ಶಕತೆ, ಸುಲಭ ಲಭ್ಯತೆ, ಮತ್ತು SC/ST ಸಮುದಾಯಗಳ ಸಬಲೀಕರಣ ಇವೆಲ್ಲವೂ ಸರ್ಕಾರದ ಗುರಿಯಾಗಿದೆ ಎಂದು ಮುನಿಯಪ್ಪ ಹೇಳಿದರು.

Previous articleಲೋಕಸಭೆಯಲ್ಲಿ ಇ-ಸಿಗರೇಟ್ ಬಳಕೆ: ಸ್ಪೀಕರ್‌ಗೆ ಅನುರಾಗ್ ಠಾಕೂರ್ ದೂರು