ಗೋವಾ ಅಗ್ನಿ ದುರಂತ: ಪ್ರಾಣಾಪಾಯದಿಂದ ಪಾರಾದ ನರ್ತಕಿ

0
68
CREATOR: gd-jpeg v1.0 (using IJG JPEG v62), quality = 75

ಪಣಜಿ: ಉತ್ತರ ಗೋವಾದ ಡಾನ್ಸ್‌ಬಾರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಕಝಾಕಿಸ್ತಾನ್‌ದ ನರ್ತಕಿ ಕ್ರಿಸ್ಟಿನಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭದ ಭಯಾನಕತೆಯ ಕುರಿತು ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಬೆಂಕಿ ಹೊತ್ತಿಕೊಂಡ ತಕ್ಷಣ ಕ್ಲಬ್‌ನಿಂದ ಜನರು ಓಡಲು ಪ್ರಾರಂಭಿಸಿದರು. ಅಲ್ಲಿನ ಸಿಬ್ಬಂದಿ ಮತ್ತು ಜನರು ಪರಸ್ಪರ ಸಹಾಯ ಮಾಡಿದರು. ನನ್ನ ಮೊದಲ ಆಲೋಚನೆ ನನ್ನ ಬಟ್ಟೆ ಬದಲಾಯಿಸುವ ಕೋಣೆಗೆ ಹೋಗಬೇಕು ಎಂದಿತ್ತು. ಆದರೆ ಅಲ್ಲಿನ ಸಿಬ್ಬಂದಿ ಸದಸ್ಯರು ನನ್ನನ್ನು ತಡೆದು ಅಲ್ಲಿಗೆ ಹೋಗಬೇಡಿ ಎಂದು ಹೇಳಿದರು. ಈ ಒಂದು ನಿರ್ಧಾರ ಮಾತ್ರ ನನ್ನ ಜೀವ ಉಳಿಸಿತು. ನಾನು ಮನೆಗೆ ಬಂದು ಮಗಳನ್ನು ತಬ್ಬಿಕೊಂಡಾಗ ಜೀವಂತವಾಗಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳಿದೆ. ಆ ದಿನ ಅಗ್ನಿ ಅವಘಡದ ಸಂದರ್ಭದಲ್ಲಿ ಅದು ನನ್ನ ಎರಡನೆಯ ಪ್ರದರ್ಶನವಾಗಿತ್ತು ಎಂದು ಆ ಭೀಕರತೆ ಸಂದರ್ಭವನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ಪ್ರತ್ಯಕ್ಷದರ್ಶಿಗಳು: ಕರ್ನಾಟಕದಿಂದ ವಾರಾಂತ್ಯದ ಪ್ರವಾಸಕ್ಕೆ ಬಂದಿದ್ದ ಕಾರ್ಪೊರೇಟ್ ಉದ್ಯೋಗಿಗಳ ಗುಂಪಿನ ಪ್ರತ್ಯಕ್ಷದರ್ಶಿಗಳು ಪರಿಸ್ಥಿತಿ ವಿವರಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಎಲ್ಲ ಲೈಟ್‌ಗಳು ಆರಿಹೋದವು. ಸಂಪೂರ್ಣವಾಗಿ ಕತ್ತಲೆಯಾಗಿತ್ತು. ಎಲ್ಲೆಡೆ ಹೊಗೆ ತುಂಬಿಕೊಂಡಿತ್ತು. ಜನರು ಹೊರಬರಲು ಪ್ರಯತ್ನಿಸುತ್ತಿದ್ದರು. ತಳ್ಳಾಟ… ನೂಕಾಟ ನಡೆಯುತ್ತಿತ್ತು. ಸ್ಫೋಟಕದ ಶಬ್ಧ ಕೇಳಿಬಂತು. ಕಾಲ್ತುಳಿತ ಸಂಭವಿಸಲಿದೆ ಎಂದು ನಾನು ಭಾವಿಸಿದ್ದೆ. ಅದೃಷ್ಟವಶಾತ್ ನಾವು ಪಾರಾದೆವು ಎಂದಿದ್ದಾರೆ.

ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ದುರ್ಘಟನೆಯಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯುವ ಸಂದರ್ಭದಲ್ಲಿ ನೈಟ್ ಬಾರ್‌ನಲ್ಲಿ ಸುಮಾರು 200 ಜನರಿದ್ದರು ಎಂಬ ಆತಂಕಕಾರಿ ವಿಷಯ ಕೂಡ ಬೆಳಕಿಗೆ ಬಂದಿದೆ.

Previous articleಜನವರಿ 5ಕ್ಕೆ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ, ಮೇಘಾಲಯ ರಾಜ್ಯಪಾಲರಿಂದ ಚಾಲನೆ
Next articleಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸ್ಥಗಿತ

LEAVE A REPLY

Please enter your comment!
Please enter your name here