ಮಾಸಿಕ ಯೋಜನೆಯ ಬೆಲೆ ಎಷ್ಟು ಮತ್ತು ಅದರ ಪ್ರಯೋಜನಗಳೇನು?
ನವದೆಹಲಿ: SpaceX ಸಂಸ್ಥೆಯ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ Starlink, ಭಾರತದಲ್ಲಿ ಅಧಿಕೃತವಾಗಿ ಇಂಟರ್ನೆಟ್ ಸೇವೆ ಆರಂಭಿಸಲು ತಯಾರಾಗಿದ್ದು, ತನ್ನ ಮಾಸಿಕ ಪ್ಲ್ಯಾನ್ ಮತ್ತು ಉಪಕರಣ ದರವನ್ನು ಬಹಿರಂಗಪಡಿಸಿದೆ. ಗ್ರಾಮೀಣ ಹಾಗೂ ಸಂಪರ್ಕವಿಲ್ಲದ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್ ತಲುಪಿಸುವ ಉದ್ದೇಶದೊಂದಿಗೆ ಭಾರತ ಮಾರುಕಟ್ಟೆ ಪ್ರವೇಶಕ್ಕೆ Starlink ಸಜ್ಜಾಗಿದೆ.
ಸೇವಾ ದರ ಬಹಿರಂಗ: Starlink ಸಂಸ್ಥೆಯ ಜಾಲತಾಣದಲ್ಲಿ ಈ ಕುರಿತಂತೆ ಮಾಹಿತಿ ನೀಡಲಾಗಿದ್ದು ಮಾಸಿಕ ಶುಲ್ಕ: ₹8,600 ಹಾಗೂ ಸ್ಯಾಟಲೈಟ್ ಸಂಪರ್ಕಕ್ಕಾಗಿ ಅಗತ್ಯವಿರುವ ಕಿಟ್ (ಡಿಷ್, ರೂಟರ್ ಮತ್ತು ಕೇಬಲಿಂಗ್ ಸೇರಿ): ₹34,000 ಎಂದು ತಿಳಿಸಿದೆ. ಈ ಹಾರ್ಡ್‌ವೇರ್ ಕಿಟ್ ಮೂಲಕ ನೇರವಾಗಿ ಉಪಗ್ರಹಗಳಿಗೆ ಸಂಪರ್ಕ ಸ್ಥಾಪಿಸಲಾಗುತ್ತದೆ. ಸಾಂಪ್ರದಾಯಿಕ ಫೈಬರ್ ಅಥವಾ ಕೇಬಲ್ ಅವಶ್ಯಕತೆ ಇಲ್ಲದೆ ‘Plug & Play’ ವ್ಯವಸ್ಥೆ ಮೂಲಕ ತಕ್ಷಣ ಸಂಪರ್ಕ ಲಬಿಸಲಿದೆ.
ಅನಿಯಮಿತ ಡೇಟಾ + 99.9% ಅಪ್‌ಟೈಮ್ ಭರವಸೆ: Starlink, ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಸ್ಥಿರ ಸಂಪರ್ಕ ಸಿಗುವುದಾಗಿ 99.9% ಅಪ್‌ಟೈಮ್ ಭರವಸೆ ನೀಡಿದೆ. ಮಳೆ, ಗಾಳಿ, ಮೋಡ ಮೊದಲಾದ ಸಂದರ್ಭಗಳಲ್ಲೂ ಸಂಪರ್ಕ ವ್ಯತ್ಯಯವಾಗದಂತೆ ವ್ಯವಸ್ಥೆ ರೂಪಿಸಲಾಗಿದೆ.
30 ದಿನಗಳ ಟ್ರಯಲ್ ಅವಧಿ: ಸೆಟ್‌ಪ್ ಮಾಡಿದ ಬಳಿಕ ಗ್ರಾಹಕರಿಗೆ 30 ದಿನಗಳ ಅನುಭವ ಅವಧಿ ನೀಡಲಾಗುತ್ತದೆ. ಸೇವೆಯ ಗುಣಮಟ್ಟ ಆಧರಿಸಿಕೊಂಡು ಮುಂದುವರಿಸುವ ಅಥವಾ ರದ್ದುಪಡಿಸುವ ಅವಕಾಶ ಸಿಗಲಿದೆ. ಆದರೆ ಟ್ರಯಲ್ ಪೂರ್ಣ ಉಚಿತವೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಪ್ರಥಮ ಹಂತದಲ್ಲಿ ವಸತಿ ಗ್ರಾಹಕರಿಗೆ: ಪ್ರಸ್ತುತ ಈ ಪ್ಲ್ಯಾನ್ ಕೇವಲ Residential (ಹೌಸ್‌ಹೋಲ್ಡ್) ಬಳಕೆದಾರರಿಗೆ ಮಾತ್ರ ಲಭ್ಯ. Business ಮತ್ತು Commercial ವಿಭಾಗಗಳಿಗೆ ಪ್ಲಾನ್‌ಗಳನ್ನು ಶೀಘ್ರ ಬರಲಿದೆ ಎಂಬ ನಿರೀಕ್ಷೆ ಇದೆ.
ಗ್ರಾಮೀಣ ಭಾರತಕ್ಕೆ ದೊಡ್ಡ ಆಶಾಕಿರಣ: ಸಾಂಪ್ರದಾಯಿಕ ನೆಟ್‌ವರ್ಕ್ ತಲುಪದ ಹಳ್ಳಿ, ಗಡಿ ಪ್ರದೇಶ, ಪರ್ವತ ಪ್ರದೇಶ, ಅರಣ್ಯ ಪ್ರದೇಶಗಳಲ್ಲಿ ಇಂಟರ್ನೆಟ್ ತಲುಪಿಸುವ ದಿಟ್ಟ ಕ್ರಮವಾಗಿ Starlink ಅನ್ನು ವಿಶ್ಲೇಷಕರು ಗಮನಿಸಿದ್ದಾರೆ. ಡಿಜಿಟಲ್ ಸೇರ್ಪಡೆ, ಆನ್‌ಲೈನ್ ಶಿಕ್ಷಣ, ದೂರ ವೈದ್ಯಕೀಯ ಹಾಗೂ ಗ್ರಾಮೀಣ ಉದ್ಯೋಗಾವಕಾಶಗಳಿಗೆ ಇದು ದೊಡ್ಡ ನೆರವು ಎಂಬ ಅಭಿಪ್ರಾಯ ಮೂಡಿದೆ.























Just grabbed the 669betbaixarapp. Installation was smooth, and the UI looks pretty slick! Fingers crossed for some good luck! Get yours here: 669betbaixarapp