ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಉಪನಾಯಕಿ ಸ್ಮೃತಿ ಮಂಧಾನಾ ಮತ್ತು ಖ್ಯಾತ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ವಿವಾಹದ ಕುರಿತು ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮನೆ ಮಾಡಿದೆ. ಅಲ್ಲದೆ, ಈ ವಿಚಾರ ಇದೀಗ ಮತ್ತೂಂದು ಹೂಸ ಚರ್ಚೆಗೆ ದಾರಿ ಮಾಡಿದೆ.
ನವೆಂಬರ್ 23 ರಂದು ನಡೆಯಬೇಕಿದ್ದ ಮದುವೆ ಕೊನೆಯ ಕ್ಷಣದಲ್ಲಿ ಸ್ಥಗಿತಗೊಂಡ ನಂತರ, ಇದೀಗ ಸ್ಮೃತಿ ಕೈನಿಂದ ನಿಶ್ಚಿತಾರ್ಥದ ಉಂಗುರ (Engagement Ring) ಮಾಯವಾಗಿರುವುದು ಈ ಜೋಡಿಯ ಸಂಬಂಧ ಮುರಿದುಬಿದ್ದಿದೆ ಎಂಬ ಊಹಾಪೋಹಗಳಿಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್: ವಿವಾಹ ಸ್ಥಗಿತಗೊಂಡ ನಂತರ ಇದೇ ಮೊದಲ ಬಾರಿಗೆ ಸ್ಮೃತಿ ಮಂಧಾನಾ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಗೇ ಬಿಡುಗಡೆ ಮಾಡಿದ ವಿಡಿಯೋ ಒಂದರಲ್ಲಿ, ಸ್ಮೃತಿ ಬೆರಳಿನಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದ ನಿಶ್ಚಿತಾರ್ಥದ ಉಂಗುರ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಕ್ರಿಕೆಟ್ ಮತ್ತು ಮನರಂಜನಾ ವಲಯದ ಈ ಇಬ್ಬರು ಸೆಲೆಬ್ರಿಟಿಗಳ ನಡುವಿನ ಸಂಬಂಧದ ಬಗ್ಗೆ ಇದರಿಂದಾಗಿ ಅಭಿಮಾನಿಗಳು ಬಹಿರಂಗವಾಗಿ ಚರ್ಚೆಗಿಳಿದಿದ್ದಾರೆ.
ಮದುವೆ ಮುಂದೂಡಿಕೆಗೆ ಕಾರಣವೇನು?: ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನಾ ವಿವಾಹವು ನವೆಂಬರ್ 23 ರಂದು ಅದ್ಧೂರಿಯಾಗಿ ನಡೆಯಲು ಸಿದ್ಧವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮದುವೆ ನಿಂತಿತ್ತು.
ಆರೋಗ್ಯ ಸಮಸ್ಯೆ: ಆರಂಭದಲ್ಲಿ, ಮಹಿಳಾ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯಾದ ಸ್ಮೃತಿ ತಂದೆ ಶ್ರೀನಿವಾಸ್ ತೀವ್ರ ಅನಾರೋಗ್ಯಕ್ಕೆ ಒಳಗಾದ ಕಾರಣ ವಿವಾಹವನ್ನು ಸ್ಥಗಿತಗೊಳಿಸಗಾಗಿತ್ತು.
ಪಲಾಶ್ ಆಸ್ಪತ್ರೆಗೆ: ಅಚ್ಚರಿ ಎಂಬಂತೆ, ವಿವಾಹದ ಮರುದಿನವೇ (ನವೆಂಬರ್ 24) ವರ ಪಲಾಶ್ ಮುಚ್ಚಲ್ ಸಹ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗುತಿತ್ತು.
ಹಾಗೇ ಪತಿ-ಪತ್ನಿ ಆಗಬೇಕಿದ್ದವರು ಒಂದೇ ಸಮಯದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಇಬ್ಬರೂ ಡಿಸ್ಚಾರ್ಜ್ ಆದ ನಂತರವೂ ವಿವಾಹದ ಹೊಸ ದಿನಾಂಕವನ್ನು ಕುಟುಂಬಗಳು ಇದುವರೆಗೆ ಪ್ರಕಟಿಸದಿರುವುದು ಹಲವಾರು ಊಹಾಪೋಹ ಮತ್ತು ಅನುಮಾನಗಳಿಗೆ ಕಾರಣವಾಗಿದೆ.
ಜಾಹೀರಾತು ಮತ್ತು ಅಧಿಕೃತ ಸ್ಪಷ್ಟತೆಯ ಕೊರತೆ: ಇನ್‌ಸ್ಟಾಗ್ರಾಮ್‌ನಲ್ಲಿ ಸ್ಮೃತಿ ಪ್ರಕಟಿಸಿದ ಇತ್ತೀಚಿನ ಪೋಸ್ಟ್‌ನಲ್ಲಿ, ಬೆರಳಿನಲ್ಲಿದ್ದ ನಿಶ್ಚಿತಾರ್ಥದ ಉಂಗುರ ಇಲ್ಲದಿರುವುದನ್ನು ಖಚಿತಪಡಿಸಿದ್ದಾರೆ.
ಹೀಗಾಗಿ ಈ ವಿಡಿಯೋವನ್ನು ಹರಿಬಿಟ್ಟ ಕಾರಣ ಅಭಿಮಾನಿಗಳಿಗೆ ಮದುವೆ ಆಗಿತ್ತೆದೆ ಅಥವಾ ಇಲ್ಲವೂ..? ಎಂಬ ಪ್ರಶ್ನೆಗಳು ಜಾಲತಾಣಗಳಲ್ಲಿ ಸದ್ದು ಮಾಡುತಿವೆ.
ಆದರೆ ಈ ಮದುವೆಯ ವಿಚಾರವಾಗಿ ಪಲಾಶ್ ಮತ್ತು ಸ್ಮೃತಿ ಮಂಧಾನಾ ಕುಟುಂಬಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲಾ. ಹೀಗಾಗಿ ಬರುವವರೆಗೂ ಈ ವದಂತಿಗಳು ಮತ್ತು ಊಹಾಪೋಹಗಳು ಮುಂದುವರಿಯಲಿವೆ ಎನ್ನಲಾಗುತ್ತಿದೆ.























