ವಿಶಾಖಪಟ್ಟಣದಲ್ಲಿ ಅಜೇಯ ದಾಖಲೆ: ಕೊಹ್ಲಿಗೆ ‘ಲಕ್ಕಿ ಗ್ರೌಂಡ್’, ದಕ್ಷಿಣ ಆಫ್ರಿಕಾಗೆ ಶತಕದ ಎಚ್ಚರಿಕೆ!

0
98

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ತ್ರೈ-ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಹಾಗೂ ಅಂತಿಮ ಪಂದ್ಯ ಇಂದು (ಶನಿವಾರ) ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಸರಣಿ ಸಮಬಲವಾಗಿರುವುದರಿಂದ ಟ್ರೋಫಿಗಾಗಿ ತೀವ್ರ ಹಣಾಹಣಿ ನಡೆಯಲಿದೆ.

ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಮತ್ತು ನೆಚ್ಚಿನ ವಿಶಾಖಪಟ್ಟಣದ ದಾಖಲೆಗಳು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿವೆ.

ಸತತ ಶತಕ ಸಿಡಿಸಿದ ರನ್ ಮಷಿನ್: ಟಿ20 ಮತ್ತು ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ನಂತರ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವ ವಿರಾಟ್ ಕೊಹ್ಲಿಯವರು ಪ್ರಚಂಡ ಫಾರ್ಮ್‌ನಲ್ಲಿದ್ದಾರೆ.

ಇತ್ತೀಚೆಗೆ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ ಅವರು ಎರಡು ಸತತ ಶತಕಗಳು ಮತ್ತು ಒಂದು ಅರ್ಧಶತಕದೊಂದಿಗೆ ಮಿಂಚಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಒಂದು ದಿನ ಪಂದ್ಯದಲ್ಲಿ ರಾಂಚಿಯಲ್ಲಿ 135 ರನ್ ಹಾಗೂ ರಾಯಪುರದಲ್ಲಿ 102 ರನ್‌ಗಳಿಸಿ ಸರಣಿಯಲ್ಲಿ ರನ್ ಹೊಳೆಯನ್ನೇ ಹರಿಸಿದ್ದರು.

ವಿಶಾಖಪಟ್ಟಣದಲ್ಲಿ ‘ಕಿಂಗ್ ಕೊಹ್ಲಿ’ ದಾಖಲೆ: ಸರಣಿಯ ಟ್ರೋಫಿ ನಿರ್ಧರಿಸುವ ಈ ಅಂತಿಮ ಪಂದ್ಯಕ್ಕೆ ವೇದಿಕೆಯಾಗಿರುವ ವಿಶಾಖಪಟ್ಟಣದ ವೈ.ಎಸ್. ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಸದ್ಯ ದಾಖಲೆ ಅತ್ಯದ್ಭುತವಾಗಿದೆ ಎನ್ನಲಾಗುತ್ತಿದೆ.

ಹಾಗೇ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ ಆಡಿರುವ 7 ಒಂದಿನ ಪಂದ್ಯಗಳಲ್ಲಿ 97.83 ರನ್‌ನ ಭರ್ಜರಿ ಸರಾಸರಿಯಲ್ಲಿ ಒಟ್ಟು 587 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಮೈದಾನದಲ್ಲಿ ಅವರು 3 ಶತಕ ಹಾಗೂ 2 ಅರ್ಧಶತಕಗಳನ್ನು ಸಿಡಿಸಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಶೂನ್ಯಕ್ಕೆ ಔಟ್ ಆಗಿದ್ದಾರೆ.

ಈ ಅಂಕಿ-ಅಂಶಗಳು ವಿಶಾಖಪಟ್ಟಣವು ಕೊಹ್ಲಿಯವರಿಗೆ ‘ಕಿಂಗ್’ ಪಟ್ಟ ತಂದುಕೊಡುವ ನೆಚ್ಚಿನ ಮೈದಾನವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲೂ ಅವರ ಬ್ಯಾಟ್‌ನಿಂದ ಮತ್ತೊಂದು ಶತಕವನ್ನು ನಿರೀಕ್ಷಿಸಲಾಗಿದೆ.

Previous articleಮಂಗಳೂರು ರೌಡಿಗಳ ಬಂಧನ: ಪೋಲಿಸ್‌ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ
Next articleನಿಶ್ಚಿತಾರ್ಥದ ಉಂಗುರ ‘ಮಿಸ್ಸಿಂಗ್’: ಸ್ಮೃತಿ-ಪಲಾಶ್ ಮುಚ್ಚಲ್ ಮದುವೆ ರದ್ದಾಗಿದ್ದು ಖಚಿತವೇ? ಅಭಿಮಾನಿಗಳಲ್ಲಿ ಆತಂಕ!

LEAVE A REPLY

Please enter your comment!
Please enter your name here