ಗ್ಯಾಸ್ ಸಿಲಿಂಡರ್ ದರ ಮತ್ತೊಮ್ಮೆ ಇಳಿಕೆ

1
114

ದೆಹಲಿ/ಬೆಂಗಳೂರು: ದೇಶದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ದರ ಇಳಿಕೆ ಪ್ರಕ್ರಿಯೆ ಮುಂದುವರಿದಿದ್ದು, ಡಿಸೆಂಬರ್ ತಿಂಗಳಲ್ಲೂ ಮತ್ತೊಮ್ಮೆ ಸಣ್ಣ ಮಟ್ಟಿನ ಕಡಿತ ನಡೆದಿದೆ. ಆದರೆ, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ, ಸಾಮಾನ್ಯ ಕುಟುಂಬಗಳಿಗೆ ರಿಲೀಫ್ ದೊರೆಯದೇ ಉಳಿದಿದೆ.

ಡಿಸೆಂಬರ್ 1ರಿಂದ ವಾಣಿಜ್ಯ ಸಿಲಿಂಡರ್ ದರದಲ್ಲಿ ₹10 ಇಳಿಕೆ: IOC, HPCL ಮತ್ತು BPCL ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆ.ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ₹10 ರಷ್ಟು ಕಡಿಮೆ ಮಾಡಿವೆ. ಈ ಹೊಸ ದರಗಳು ಡಿಸೆಂಬರ್ 1ರಿಂದಲೇ ಜಾರಿಗೆ ಬಂದಿವೆ. ಈ ಮುಂಚೆ ನವೆಂಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ₹5 ಕಡಿಮೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ 51 ರೂಪಾಯಿ ಇಳಿಕೆಯಾಗಿತ್ತಯ.

ಗೃಹ ಬಳಕೆಯ ಗ್ಯಾಸ್ ದರವು ಯಥಾಸ್ಥಿತಿ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರವು ಹಲವು ತಿಂಗಳುಗಳಾದರೂ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ದೇಶದಾದ್ಯಂತ ಗೃಹ ಬಳಕೆಯ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವುದರಿಂದ ಕಳೆದ ಕೆಲವು ತಿಂಗಳಲ್ಲಿ ಸಂಗ್ರಹಾತ್ಮಕವಾಗಿ ಖರ್ಚಿನ ಇಳಿಕೆಯನ್ನು ಅನುಭವಿಸುತ್ತಿದ್ದಾರೆ. ಒಟ್ಟು ಕಳೆದ ನಾಲ್ಕೈದು ತಿಂಗಳಿಂದ ವಾಣಿಜ್ಯ ಸಿಲಿಂಡರ್ ದರಗಳು ಗಣನೀಯವಾಗಿ ಇಳಿಕೆಯ ದಾರಿಗೆ ಸಾಗುತ್ತಿವೆ. ಇದು ಆತಿಥ್ಯ, ಆಹಾರ ಉದ್ಯಮಕ್ಕೆ ಸ್ವಲ್ಪ ಮಟ್ಟಿನ ನಿರಾಳತೆಯನ್ನು ನೀಡಿದೆ.

Previous articleಬಿಸ್ಕತ್ ಸಾಮ್ರಾಜ್ಯ ಕಟ್ಟಿ ದೇಶಕ್ಕೆ ಪರಿಚಿತನಾದ ಮಂಡ್ಯದ ಗಂಡು
Next articleಪ್ರಧಾನಿ ಮೋದಿ ವಾಗ್ದಾಳಿ: ರಾಜಕೀಯ ನಾಟಕ ಬಿಟ್ಟು ರಚನಾತ್ಮಕ ಚರ್ಚೆಗೆ ಬನ್ನಿ, ಬಿಹಾರ ಸೋಲಿನ ಹತಾಶೆ

1 COMMENT

  1. Alright, so I gave cwin666 a shot and honestly, it’s not bad! The games are pretty decent and I managed to snag a few wins. Definitely worth checking out if you’re looking for a new spot. Check them out here cwin666.

LEAVE A REPLY

Please enter your comment!
Please enter your name here