ಸ್ಯಾಂಟ್ರೊ ರವಿ ಬಂಧನ: ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್

0
18
ಅಲೋಕ ಕುಮಾರ

ಶ್ರೀರಂಗಪಟ್ಟಣ: ಸ್ಯಾಂಟ್ರೋ ರವಿ ಬಂಧನವಾಗಲಿ ಎಂದು ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದೆ. ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಎಡಿಜಿಪಿ ಅಲೋಕ್ ಹೇಳಿಕೆ ನೀಡಿದ್ದು. ಆತನಿಂದಾಗಿ ಸರ್ಕಾರಕ್ಕೆ, ಪೊಲೀಸ್‌ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು, ಹಾಗಾಗಿ ಆತ ಬೇಗ ಸಿಗಲಿ ಎಂದು ಹರಕೆ ಹೊತ್ತಿದೆ, ನಾನು ಹರಕೆ ಹೊತ್ತ 22 ಗಂಟೆಗಳಲ್ಲೇ ಸ್ಯಾಂಟ್ರೋ ರವಿ ಸಿಕ್ಕಿ ಬಿದ್ದಿದ್ದಾನೆ. ಆತ ಈಗ ನಮ್ಮ ಕಸ್ಟಡಿಯಲ್ಲಿದ್ದಾನೆ. ಆತ ತಲೆ ಮರೆಸಿಕೊಂಡು ಎಲ್ಲಎಲ್ಲಿ ಇದ್ದ, ಆತನಿಗೆ ಯಾರೆಲ್ಲಾ ಸಹಾಯ ಮಾಡಿದರು ಎಂಬ ಬಗೆಗೆ ವಿಚಾರಣೆ ಮಾಡುತ್ತೇವೆ, ಹಾಗೊಂದು ವೇಳೆ ಯಾರಾದರೂ ಸಹಾಯ ಮಾಡಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದರು.

Previous articleಯತ್ನಾಳ್‌ಗೆ ಅವರದೇ ಭಾಷೆಯಲ್ಲಿ ಎಚ್ಚರಿಕೆ ನೀಡಿದ ನಿರಾಣಿ
Next articleರಾಮುಲು ಆಪ್ತರ ಮನೆ ಮೇಲೆ ಐಟಿ ದಾಳಿ