ದಾವಣಗೆರೆ: ಹಿಂದೂ ಧರ್ಮವೇ ಅಲ್ಲ ಎನ್ನುವವರು ಮೊದಲು ಬಸವಣ್ಣನವರದ್ದೂ ಸೇರಿ ಎಲ್ಲಾ ಶರಣರ ವಚನಗಳನ್ನು ಅಧ್ಯಯನ ಮಾಡಿ. ವೇದ, ಉಪನಿಷತ್ತು ಓದಿಕೊಂಡು ಚರ್ಚೆಗೆ ಬನ್ನಿ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಪ್ರತ್ಯೇಕ ಧರ್ಮದ ಮಾನ್ಯತೆ ಕೇಳುವವರಿಗೆ ಸವಾಲು ಹಾಕಿದ್ದಾರೆ.
ದಾವಣಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಕೆಲವೊಂದು ವಿಚಾರ ತಪ್ಪಿದ್ದರೆ ಎಲ್ಲವೂ ತಪ್ಪೆಂದು ವ್ಯಾಖ್ಯಾನಿಸಲಾಗಲ್ಲ. ದೇವರ ಪರಿಕಲ್ಪನೆ ಉಪನಿಷತ್ತುಗಳಲ್ಲಿ ಇರುವಂತೆಯೇ ವಚನಗಳಲ್ಲಿದೆ. ಆದರೆ, ವಚನಗಳಲ್ಲಿ ಸ್ವಲ್ಪ ಮುಂದುವರೆದಿದೆ ಎಂದರು.
ನಮ್ಮ ತತ್ವ, ಸಿದ್ಧಾಂತ ಏನೇ ಇದ್ದರೂ ದೇಶದ ಪ್ರಗತಿಯ ದೃಷ್ಟಿ ಹಿನ್ನೆಲೆಯಲ್ಲಿ ನಾವೆಲ್ಲಾ ಹಿಂದೂಗಳಾಗಿ ಒಗ್ಗೂಡಬೇಕು. ಪ್ರಸ್ತುತ, ಲಂಡನ್‌ನಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ನೆರೆಯ ಅಫ್ಘಾನಿಸ್ತಾನ, ಪಾಕಿಸ್ತಾನ, ಶ್ರೀಲಂಕಾದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಿ. ಆದರೆ, ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ನಾವು ಕಾಣುತ್ತಿದ್ದೇವೆ. ನಾವೆಲ್ಲಾ ಒಂದಾಗಿ ಹೋಗಬೇಕಾದ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚಿದೆ ಎಂದು ಸೂಚ್ಯವಾಗಿ ಹೇಳಿದರು.
ಪ್ರಸ್ತುತ, ನಾವು ಮೊದಲು ಹಿಂದೂಗಳು ನಂತರ ಲಿಂಗಾಯತರು, ವೀರಶೈವರು ಎಲ್ಲವೂ. ಹಾಗಾಗಿ ನಾವೆಲ್ಲಾ ಹಿಂದೂಗಳಾಗಿ, ಒಂದಾಗಿ ಹೋಗಬೇಕು. ನಾವು ಮಾಡುವ ಪೂಜೆ ಪುನಸ್ಕಾರ ಬೇರೆಯಾದರೂ ಭಕ್ತರ ಮುಖದರ್ಪಣದಲ್ಲಿ ಲಿಂಗವ ಕಾಣಬೇಕು ಎನ್ನುವುದನ್ನ ಬಸವಣ್ಣನವರೇ ಹೇಳಿದ್ದಾರೆ. ನೀವು ಹೇಗಿದ್ದೀರೋ ಹಾಗೆ ನಿಮ್ಮನ್ನ ನಾವು ಇಷ್ಟಪಡಬೇಕು. ಅದೇ ಬಸವತತ್ವ ಎಂದರು.
ಕೆಲವರಿಗೆ ಪ್ರತ್ಯೇಕ ಧರ್ಮವಷ್ಟೇ ಅವರ ಉದ್ದೇಶ. ಯಾರು ಸಮಾಜವನ್ನು ಸರಿದಾರಿಗೆ ಕೊಂಡೊಯ್ತುತ್ತಿದ್ದಾರೆ. ಯಾರು ಸಮಾಜ ಒಡೆಯುತ್ತಿದ್ದಾರೆ ಎಂದು ಈಗ ಜನರಿಗೆ ಗೊತ್ತಾಗಿದೆ. ಅವರು ಕತ್ತರಿಯಾಗಿ ಕತ್ತರಿಸಲಿ ನಾವು ನಾವು ಸೂಜಿಯಾಗಿ ಜೋಡಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಉಪಹಾರ ಮಾಡಿ ಎಲ್ಲಾ ಹೊಂದಾಣಿಕೆಯಿಂದಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗೆ ಗಮನಕೊಡಿ. ಜನರಿಗೆ ಬೇಕಿರುವುದು ಉತ್ತಮ ರಸ್ತೆಗಳು, ಮೂಲಭೂತ ಸೌಕರ್ಯಗಳು, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ರೈತರಿಗೆ ಸ್ಪಂದಿಸಿ. ರೈತರ ಕಡೆಗೆ ಚಿಂತನೆ ನಡೆಸಿ. ನಮ್ಮ ಮಠ, ಪೀಠಗಳು ರೈತರ ಪರವಾಗಿರುತ್ತವೆ ಎಂದರು.
























I just found the main page for JILI7 at jili7home. Has everything you need right from the source. Straight to the good stuff!