ಬೆಂಗಳೂರು: ಮಂಗಳೂರಿನ ವಿವಾಹಿತ ದಂಪತಿಯ ಕೊಲೆ ಪ್ರಕರಣದ ಆರೋಪಿಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಆತನ ಹುಚ್ಚುತನದ ಹೇಳಿಕೆಯನ್ನು ಬದಿಗಿಟ್ಟಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠವು ನವೆಂಬರ್ 3 ರಂದು ಈ ಆದೇಶವನ್ನು ಜಾರಿಗೊಳಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಅಲ್ಫೋನ್ಸ್ ಸಲ್ಡಾನಾ 2020 ರಲ್ಲಿ ಮಂಗಳೂರು ತಾಲ್ಲೂಕಿನ ಯೆಲಿಂಜೆ ಗ್ರಾಮದಲ್ಲಿ ವಿನ್ಸೆಂಟ್ ಮತ್ತು ಹೆಲೆನ್ ಡಿ’ಸೋಜಾ ಅವರನ್ನು ಇರಿದು ಕೊಂದಿದ್ದ ಎಂದು ಆರೋಪಿಸಲಾಗಿದೆ.
ಸಲ್ಡಾನಾ ಅವರು ವಿಚಾರಣಾ ನ್ಯಾಯಾಲಯಕ್ಕೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ ಒಂದು ಅರ್ಜಿಯು ಅವರ ವೈದ್ಯಕೀಯ ದಾಖಲೆಗಳನ್ನು ಸಾಕ್ಷ್ಯ ಕಾಯ್ದೆಯಡಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ವಿಧಿವಿಜ್ಞಾನ ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಕಳುಹಿಸಬೇಕೆಂದು ಕೋರಿತ್ತು .
ಮಾನಸಿಕ ಆರೋಗ್ಯ ಕಾಯ್ದೆಯ ಸೆಕ್ಷನ್ 105 ರ ಅಡಿಯಲ್ಲಿ ಮತ್ತೊಂದು ಅರ್ಜಿಯು ಅವರ ದಾಖಲೆಗಳನ್ನು ಪರೀಕ್ಷೆಗೆ ಮಂಡಳಿಯ ಮುಂದೆ ಇಡಬೇಕೆಂದು ಕೋರಿತ್ತು. ಮಾನಸಿಕ ಅಸ್ವಸ್ಥತೆಯ ಪುರಾವೆಯನ್ನು ಹಾಜರುಪಡಿಸಿ ಪ್ರಶ್ನಿಸಿತ್ತು. ಆದರೆ ಅದನ್ನ ವೈದ್ಯಕೀಯ ಮಂಡಳಿಗೆ ಕಳುಹಿಸಬೇಕು ಎಂದು ಸೆಕ್ಷನ್ 105 ಹೇಳುತ್ತದೆ.
ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿಗಳು ವಜಾಗೊಂಡಾಗ, ಆರೋಪಿಯು ಹೈಕೋರ್ಟ್‌ನ ಮೊರೆ ಹೋದನು. ತನ್ನ ಪ್ರಕರಣವನ್ನು ಮಂಡಳಿಗೆ ಉಲ್ಲೇಖಿಸಬೇಕಾಗಿರುವುದರಿಂದ, ವಿಚಾರಣಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಬಾರದಿತ್ತು ಎಂದು ವಾದಿಸಿದ್ದಾರೆ.
“ಅವರು ನೀಡಿರುವ ಸಾಕ್ಷ್ಯಗಳು ‘ಮನಸ್ಸಿನ ಅಸ್ವಸ್ಥತೆ’ಯನ್ನು ಸಾಬೀತುಪಡಿಸಲು ಸಾಕಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು” ಎಂದು ಕರ್ನಾಟಕ ಹೈಕೋರ್ಟ್ ಪೀಠ ಹೇಳಿದೆ. ಮಾನಸಿಕ ಆರೋಗ್ಯ ಕಾಯ್ದೆಯಡಿ ಬರುವ ಪ್ರತಿಯೊಂದು ಮಾನಸಿಕ ಅಸ್ವಸ್ಥತೆಯೂ ಅಸ್ವಸ್ಥ ಮನಸ್ಸಿನ ಮಟ್ಟಕ್ಕೆ ಬರುವುದಿಲ್ಲ ಎಂದು ಪೀಠ ವಿವರಿಸಿ ಸ್ಪಷ್ಟನೆ ನೀಡಿದೆ.
“ಎಲ್ಲಿಯೂ… ಅರ್ಜಿದಾರರು (ಮನೋವೈದ್ಯರು) ಮೃತನನ್ನು ಕೊಂದ ಕೃತ್ಯದ ಸ್ವರೂಪವನ್ನು ತಿಳಿದುಕೊಳ್ಳಲು ಅಸಮರ್ಥರಾಗಿದ್ದಾರೇ, ಅವರು ಮಾಡಿರುವುದು ತಪ್ಪು ಅಥವಾ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿಕೆಯನ್ನ ಸ್ಪಷ್ಟಿಪಡಿಸಲು ಸಾಕಷ್ಟು ಪ್ರಶ್ನೆಯನ್ನು ಕೇಳಲಾಗಿಲ್ಲ. ಇಲ್ಲಿಯವರೆಗೆ ನೀಡಲಾದ ಇತರ ವ್ಯಕ್ತಿಗಳ ಪುರಾವೆಗಳು ಸಹ ಮನಸ್ಸಿನ ಅಸ್ವಸ್ಥತೆಯ ಅಂಶವನ್ನು ಪೂರೈಸುವುದಿಲ್ಲ” ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
























