ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್)ಕ್ಕೆ ಭವಿಷ್ಯದ ಅಗತ್ಯತೆ ಪೂರೈಸಲು 1500 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲು ಯೋಜನೆಯೊಂದನ್ನು ರೂಪಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) 2025-26ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗೆ 6.5 ಕೋಟಿ ರೂ. ವೆಚ್ಚದಲ್ಲಿ ಸಲಹಾ ಕಾರ್ಯ ನಿಭಾಯಿಸಲು ಗುರುಗ್ರಾಮ್ ಮೂಲದ ರಿಸರ್ಜೆಂಟ್ ಇಂಡಿಯಾ ಲಿಮಿಟೆಡ್ ಅನ್ನು ನ.14 ರಂದು ನೇಮಿಸಿದೆ.
ಸಂಸ್ಥೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಭೂ ಬಳಕೆ, ಸಂಚಾರ ಹರಿವು ಮತ್ತು ವಾಣಿಜ್ಯ ಅಭಿವೃದ್ಧಿಯನ್ನು ಅಧ್ಯಯನ ಮಾಡುತ್ತದೆ. ಜನವರಿ ಅಂತ್ಯದ ವೇಳೆಗೆ ಅದರ ವರ ದಿಯನ್ನು ಅನುಮೋದನೆಗಾಗಿ ಸಂಪುಟದ ಮುಂದೆ ಇಡಲಾಗುವುದು. ಮುಂದಿನ ವರ್ಷದಲ್ಲಿ ಟೆಂಡರ್ ಕರೆಯಲು ಕೆಎಸ್‌ಆರ್‌ಟಿಸಿ ಯೋಚಿಸಿದೆ.
ಈ ಯೋಜನೆಯಡಿ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳನ್ನು ತೆರ ವುಗೊಳಿಸಲಾಗುವುದು ಮತ್ತು 32 ಎಕರೆ ಭೂಮಿಯನ್ನು ಹೊಸ ಬಸ್ ಟರ್ಮಿನಲ್ ಹಾಗೂ ವಾಣಿಜ್ಯ ಕೇಂದ್ರವಾಗಿ ಮತ್ತೆ ನಿರ್ಮಿಸಲಾಗುವುದು.
ಈ ಕುರಿತಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಆಕ್ರಮ್ ಪಾಷಾ ಅವರು, 1500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ನಡೆಯಲಿದೆ. ಆದರೆ ಇದಿನ್ನೂ ಯೋಜನಾ ಹಂತದಲ್ಲಿದೆ. ಶೀಘ್ರದಲ್ಲೇ ಅಂತಿಮವಾಗಲಿದೆ ಎಂದು ಸ್ಪಷ್ಟಪಡಿಸಿದರು.
ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಪ್ರಾಂತಿಯ ರೈಲು ಇಂಟರ್‌ಚೆಂಜ್ ಮತ್ತು ಸುತ್ತಲಿನ ಪ್ರದೇಶದೊಂದಿದೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ನಿಲ್ದಾಣ ವ್ಯವಸ್ಥಿತವಾಗಿ ಸಂಪರ್ಕಿಸುವಂತೆ ಮಾಡುವುದೇ ಪುನರ್ ನಿರ್ಮಾಣದ ಮುಖ್ಯ ಉದ್ದೇಶವಾಗಿದೆ.ಈ ಸ್ಥಳದಲ್ಲಿ ಬಹುಮಹಡಿ ವ್ಯಾಪಾರ ಕಟ್ಟಡಗಳು ಹಾಗೂ ಇಂಟರ್‌ಚೆಂಜ್ ಪ್ರದೇಶ ಗಳಲ್ಲಿ ರಿಟೇಲ್ ಶಾಪಿಂಗ್ ಹಬ್‌ಗಳನ್ನು ನಿರ್ಮಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಗಮ ಜೋಡಣೆಗಾಗಿ ಬಸ್ ನಿಲ್ದಾಣಗಳನ್ನು ಮೆಟ್ರೋ ಮತ್ತು ರೈಲು ನಿಲ್ದಾಣಗಳಿಗೆ ನೇರವಾಗಿ ಸಂಪರ್ಕಿಸುವಂತೆ ಯೋಜನೆ ಮಾಡ ಲಾಗುತ್ತಿದೆ. ಇದರಲ್ಲಿ ರೈಲ್ವೆ ನಿಲ್ದಾಣ ಕೂಡ ನೇರವಾಗಿ ಸೇರಲಿದೆ. ಸಲಹೆಗಾರರು ಈ ಸಂಪರ್ಕಗಳ ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸುವರು ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ಮೆಜೆಸ್ಟಿಕ್‌ನಲ್ಲಿ 31920 ಚದರ ಮೀಟರ್ ವಿಸ್ತೀರ್ಣದ ಅಡಿಯಲ್ಲಿ ನಗರದ ಅತಿದೊಡ್ಡ ನಿಲ್ದಾಣವನ್ನು ನಿರ್ಮಿಸಿರುವ ನಮ್ಮ ಮೆಟ್ರೋ, ಒಂದು ಮಿಲಿಂಯನ್ ಚದರ ಮೀಟರ್‌ಗಿಂತಲೂ ಹೆಚ್ಚು ವಾಣಿಜ್ಯ ಸ್ಥಳ ಮತ್ತು ತನ್ನ ಅತಿದೊಡ್ಡ ಪಾಕಿರ್ಂಗ್ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ.
ಪ್ರತಿ ನಿತ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ 80,000 ಪ್ರಯಾಣಿಕರು ಬರಲಿದ್ದು 2660 ಬಸ್‌ಗಳು ಕಾರ್ಯನಿರ್ವಹಿಸುತ್ತವೆ. ಬಿಎಂಟಿಸಿ ಬಸ್ ನಿಲ್ದಾಣಕ್ಕೆ 5 ಲಕ್ಷ ಪ್ರಯಾಣಿಕರು ಬರುತ್ತಾರೆ. 11,150 ಬಸ್‌ಗಳು ಸಂಚರಿಸುತ್ತವೆ.

























