ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಲೋಕಾಯುಕ್ತ ಬಿರುಸಿನ ದಾಳಿ

0
49

ಬೆಂಗಳೂರು: ರಾಜ್ಯದಾದ್ಯಂತ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ತಂಡಗಳು ದೊಡ್ಡ ಮಟ್ಟದ ಆಪರೇಷನ್ ನಡೆಸಿದ್ದು, ಒಟ್ಟು 11 ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಒಂದೇ ಸಮಯದಲ್ಲಿ ದಾಳಿ ನಡೆಸಲಾಗಿದೆ. ಬೆಳ್ಳಂ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಆರಂಭವಾದ ಈ ಶೋಧ ಕಾರ್ಯ ಬೆಂಗಳೂರು, ಮೈಸೂರು, ಧಾರವಾಡ, ಬೀದರ್, ದಾವಣಗೆರೆ, ಕೊಡಗು, ಹಾವೇರಿ, ಮಡಿಕೇರಿ, ಮಂಡ್ಯ ಮತ್ತು ಯಾದಗಿರಿ ಸೇರಿದಂತೆ 10 ಜಿಲ್ಲೆಗಳಲ್ಲಿ ನಡೆಯುತ್ತಿದೆ.

ಈ ದಾಳಿ ಅಕ್ರಮ ಆಸ್ತಿ ಗಳಿಕೆ ಮತ್ತು ಅಧಿಕಾರ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ನಡೆದಿದೆ.

ಬೀದರ್: ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರೇಮ್‌ಸಿಂಗ್ ರಾಥೋಡ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಹನುಮಂತರಾಯ್ ನೇತೃತ್ವದಲ್ಲಿ ಶೋಧ ನಡೆಸಲಾಗುತ್ತಿದೆ.

ಯಾದಗಿರಿ: ಭೀಮರಾಯನಗುಡಿ ಪ್ರದೇಶದಲ್ಲಿರುವ ಅಧಿಕಾರಿ ಮನೆ-ಕಚೇರಿಗಳ ಪರಿಶೀಲನೆ ಮುಂದುವರಿಯುತ್ತಿದೆ.

ಶಿವಮೊಗ್ಗ: ಮೆಡಿಕಲ್ ಕಾಲೇಜಿನ ಡೀನ್ ಸ್ಟೇನೋಗ್ರಾಫರ್ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ.

ಕೊಡಗು ಮತ್ತು ಮಡಿಕೇರಿ: PWD ಇಂಜಿನಿಯರ್ ಗಿರೀಶ್ ಅವರ ಮನೆ-ಕಚೇರಿಗಳೊಂದಿಗೆ, ಮಡಿಕೇರಿಯಲ್ಲಿ ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್ ವೀಣಾ ನಾಯ್ಕ್ ನೇತೃತ್ವದಲ್ಲಿ ಶೋಧ.

ಮಂಡ್ಯ: ಒಂದೇ ಸಮಯದಲ್ಲಿ 5 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, CAO ಪುಟ್ಟಸ್ವಾಮಿ ಮನೆ-ಕಚೇರಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ: APMC ಸಹಾಯಕ ನಿರ್ದೇಶಕ ಪ್ರಭು ಅವರ ನಿವಾಸ, ಕಚೇರಿ ಮತ್ತು ಸಂಬಂಧಿಕರ ಮನೆಗಳಲ್ಲೂ ಪರಿಶೀಲನೆ ನಡೆದಿದೆ.

ಹಾವೇರಿ: ನಗರಾಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶೇಖಪ್ಪ ಮತ್ತಿಕಟ್ಟಿ ಮನೆ ಮೇಲೆ ದಾಳಿ.

ಧಾರವಾಡ: ಪ್ರೊಫೆಸರ್ ಸುಭಾಷ್ ಚಂದ್ರ ಅವರ ನಿವಾಸದಲ್ಲಿ ಶೋಧ ಕಾರ್ಯ.

ಮೈಸೂರು: Revenue Inspector ರಾಮಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ.

Previous articleಸಿಎಂ ಆಗಿ ಎಂದು ಡಿಸಿಎಂಗೆ ನಾಗಾಸಾಧುಗಳ ಆಶೀರ್ವಾದ
Next articleಕವಿವಿ ಪ್ರೊಫೆಸರ್‌ ನಾಟೀಕರಗೆ ಲೋಕಾ ಶಾಕ್

LEAVE A REPLY

Please enter your comment!
Please enter your name here