ವಾಲ್ಮೀಕಿ ಸಮಾಜಕ್ಕೆ ಅವಮಾನ: ವಿವಾದಕ್ಕೀಡಾದ ತಹಶೀಲ್ದಾರ ವರದಿ – ರಮೇಶ್ ಜಾರಕಿಹೊಳಿ ಆಕ್ರೋಶ

0
37

ಬೆಳಗಾವಿ: ವಾಲ್ಮೀಕಿ ಸಮಾಜಕ್ಕೆ ಧಕ್ಕೆ ತಂದ ಹುಕ್ಕೇರಿ ತಹಶೀಲ್ದಾರ ನೀಡಿದ ವರದಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ವಿವಾದವನ್ನು ಹುಟ್ಟು ಹಾಕಿದೆ. ಮಾಜಿ ಸಂಸದ ರಮೇಶ ಕತ್ತಿ ಅವರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಗ್ರೇಡ್-2 ತಹಶೀಲ್ದಾರರು ಕೋಟರ್್ಗೆ ಸಲ್ಲಿಸಿದ ಬೇಡ ಸಮಾಜವು ಎಸ್ಟಿ ಪಟ್ಟಿಗೆ ಸೇರಿಲ್ಲ, ಪ್ರವರ್ಗ 1ಕ್ಕೆ ಸೇರಿದೆ ಎಂಬ ವರದಿ ವಾಲ್ಮೀಕಿ ಸಮುದಾಯದಲ್ಲಿ ತೀವ್ರ ಅಸಮಾಧಾನ ಎಬ್ಬಿಸಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಗೋಕಾಕ ಶಾಸಕ ರಮೇಶ ಕತ್ತಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಎಫ್ಆಯ್ ಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಇದು ಕೇವಲ ತಾಂತ್ರಿಕ ತಪ್ಪು ಅಲ್ಲ. ವಾಲ್ಮೀಕಿ ಸಮುದಾಯದ ಗೌರವಕ್ಕೆ ಹೊಡೆತ. ಅಧಿಕಾರಿಯ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಿ ಅಮಾನತುಗೊಳಿಸಬೇಕು ಎಂದು ಪುನರುಚ್ಚರಿಸಿದರು,

ದೇಶದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ಪ್ರತಿನಿಧಿಸುವ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರು ಹಾಗೂ ವಾಲ್ಮೀಕಿ ಸಮುದಾಯದ ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ, ಇಂತಹ ನಿರ್ಲಕ್ಷ್ಯ ನಡೆದುಬಂದಿರುವುದನ್ನು ಜಾರಕಿಹೊಳಿ ಗಂಭೀರವಾಗಿ ಪ್ರಶ್ನಿಸಿದರು. ಸ್ವಾಮೀಜಿಗಳ ನೇತೃತ್ವದಲ್ಲಿ ಸಮುದಾಯದ ನಾಯಕರ ಸಭೆ ನಡೆಯಲಿದೆ. ಸಕರ್ಾರಕ್ಕೆ ಅಧಿಕೃತ ಪತ್ರ ಬರಲಿದೆ. ತಪ್ಪು ಮಾಹಿತಿ ಕೋಟರ್್ಗೆ ಸಲ್ಲಿಸಿದ ಅಧಿಕಾರಿಯನ್ನು ತಕ್ಷಣ ವಜಾಗೊಳಿಸಬೇಕು ಎಂದು ಹೇಳಿದರು.

ಇದು ನೋವಿನ ದಿನ: ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಅನೇಕ ಜನಪ್ರತಿನಿಧಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇಂಥ ಸಮಾಜದ ಬಗ್ಗೆ ಎಸ್ಟಿ ಅಲ್ಲ ಎಂಬ ಹೇಳಿಕೆ ನೀಡುವುದು ದುರದೃಷ್ಟ. ಇಡೀ ಸಮಾಜದ ಮನಸ್ಸಿಗೆ ನೋವಾಗಿಸಿದೆ. ಇಂಥ ವರದಿ ನೀಡಲು ಅಧಿಕಾರಿಗೆ ಧೈರ್ಯ ಬಂದದ್ದು ಏಕೆ? ಎಂದು ರಮೇಶ ಜಾರಕಿಹೊಳಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಚಳವಳಿಯ ಬೆಂಬಲವನ್ನು ನೆನಪಿಸಿಕೊಂಡು, ಆ ಅಹಿಂದಕ್ಕೆ ನಾವು ನಿಂತಿದ್ದೇವೆ. ಇಂದು ಆ ಸರ್ಕಾರವೇ ನಮ್ಮ ನ್ಯಾಯಕ್ಕೆ ಕಂಬನಿ ಮಿಡಿಯಬೇಕು ಎಂದರು. ಕುರುಬ ಸಮಾಜ ಎಸ್ಟಿಗೆ ಸೇರಿಸಿದರೆ ನಮಗೆ ವಿರೋಧ ಇಲ್ಲ, ಆದರೆ ಮೀಸಲಾತಿ ಶೇಕಡಾವಾರು ಹೆಚ್ಚಿಸಲೇಬೇಕು ಎಂದು ಅವರು ಅಭಿಪ್ರಾಯಪಟ್ಟರು.

Previous articleBangalore: ಈಕ್ಯೂಬ್‌ ಸ್ಯಾಪ್‌ ಚಾಂಪಿಯನ್ಸ್ ಪ್ರಶಸ್ತಿ 2025ರ ಸಂಭ್ರಮ: ಶಿಕ್ಷಣದಲ್ಲಿ ಉದ್ದೇಶ ಮತ್ತು ಸಾಮಾಜಿಕ ಪ್ರಜ್ಞೆಯ ಮರು ವ್ಯಾಖ್ಯಾನ
Next articleಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಪಲ್ಟಿ: ನಾಲ್ವರ ಸಾವು

LEAVE A REPLY

Please enter your comment!
Please enter your name here