ಸ್ಮೃತಿ ಮಂಧಾನ ವಿವಾಹ ಸ್ಥಗಿತ! ಏನಾಯಿತು ಸಾಂಗ್ಲಿಯಲ್ಲಿ? ಇಲ್ಲಿದೆ ಮಾಹಿತಿ

0
11

Smriti Mandhana’s wedding postponed: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮನೆಯಲ್ಲಿ ಸಂಭ್ರಮದ ಸಾಗರವೇ ಹರಿದಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವರು ಹಸೆಮಣೆ ಏರಬೇಕಿತ್ತು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ಮದುವೆ ಮಂಟಪದಲ್ಲೇ ನಡೆದ ಆಘಾತಕಾರಿ ಘಟನೆಯಿಂದಾಗಿ ಸ್ಮೃತಿ ಮಂಧಾನ ವಿವಾಹ ಕಾರ್ಯಕ್ರಮವನ್ನು ದಿಢೀರ್ ಮುಂದೂಡಲಾಗಿದೆ.

ಏನಾಯಿತು ಸಾಂಗ್ಲಿಯಲ್ಲಿ?: ಭಾನುವಾರ (ನ.23) ಸ್ಮೃತಿ ಹುಟ್ಟೂರಾದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅದ್ಧೂರಿ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಬಾಲಿವುಡ್ ಸಂಗೀತ ಸಂಯೋಜಕ ಹಾಗೂ ದೀರ್ಘಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ಸ್ಮೃತಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು.

ಮದುವೆ ವಿಧಿವಿಧಾನಗಳು ನಡೆಯುತ್ತಿದ್ದ ಸಂದರ್ಭದಲ್ಲೇ, ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡು ಲಘು ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಕಾರ್ಯಕ್ರಮವಿದ್ದ ಸ್ಥಳಕ್ಕೆ ಅಂಬ್ಯುಲೆನ್ಸ್ ಕರೆಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆಯ ಆರೋಗ್ಯ ಹದಗೆಟ್ಟಿದ್ದರಿಂದ ಮದುವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಸಂಭ್ರಮದ ಕ್ಷಣಗಳು ವೈರಲ್: ದುರಂತ ಸಂಭವಿಸುವ ಮುನ್ನ ಮದುವೆ ಮನೆಯಲ್ಲಿ ಸಂತೋಷ ಮನೆಮಾಡಿತ್ತು. ಅರಿಶಿನ ಶಾಸ್ತ್ರ ಮತ್ತು ಮೆಹಂದಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದ್ದವು. ವಿಶೇಷವೆಂದರೆ, ವಧು ಮತ್ತು ವರನ ಕಡೆಯವರು ಒಂದು ಸ್ನೇಹಪರ ಕ್ರಿಕೆಟ್ ಪಂದ್ಯವನ್ನೂ ಆಡಿದ್ದರು.

ಸ್ಮೃತಿ ಮತ್ತು ಪಲಾಶ್ ಒಟ್ಟಿಗೆ ಹೆಜ್ಜೆ ಹಾಕಿದ ಸುಂದರ ನೃತ್ಯದ ವಿಡಿಯೋಗಳು ಹಾಗೂ ಟೀಂ ಇಂಡಿಯಾದ ಆಟಗಾರ್ತಿಯರು ಮದುವೆಯಲ್ಲಿ ಸಂಭ್ರಮಿಸಿದ ದೃಶ್ಯಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Previous article‘ಕುರ್ಚಿ ಬಿಡಲ್ಲ, ಹೈಕಮಾಂಡ್‌ಗೂ ಬಗ್ಗಲ್ಲ’: ಸರ್ಕಾರ ಪತನದ ಸ್ಫೋಟಕ ಭವಿಷ್ಯ ನುಡಿದ ಶೆಟ್ಟರ್!
Next articleಪರಮೇಶ್ವರ ಸಿಎಂ ಆಗಲಿ: ಶಾಸಕ ಅಬ್ಬಯ್ಯ

LEAVE A REPLY

Please enter your comment!
Please enter your name here