ರೈಲಿನಲ್ಲಿ ಕೆಟಲ್ ಬಳಸಿ ಮ್ಯಾಗಿ ಮಾಡಿದ ಮಹಿಳೆ: ಇಲಾಖೆಯಿಂದ ಎಚ್ಚರಿಕೆ ಸಂದೇಶ

0
44

ಮುಂಬೈ–ಮಹಾರಾಷ್ಟ್ರ ರೈಲು ಪ್ರಯಾಣದಲ್ಲಿ ನಡೆದ ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಭಾರತೀಯ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಮಹಿಳೆಯೊಬ್ಬರು ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗೆ ಎಲೆಕ್ಟ್ರಿಕ್ ಕೆಟಲ್ ಜೋಡಿಸಿ ಮ್ಯಾಗಿ ಬೇಯಿಸಿದ್ದು, ನಂತರ ಅದೇ ಕೆಟಲ್‌ನಲ್ಲಿ 15 ಜನರಿಗೆ ಚಹಾ ಮಾಡಬೇಕೆಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ವೈರಲ್ ವೀಡಿಯೊದಲ್ಲಿ ಮಹಿಳೆ ಹಾಸ್ಯವಾಗಿ “ಪ್ರವಾಸದಲ್ಲಿದ್ದರೂ ಅಡುಗೆಮನೆಯಿಂದ ಪಾರಾಗಲು ಆಗೋದಿಲ್ಲ” ಎಂದು ಹೇಳಿರುವುದು, ನೆಟ್ಟಿಗರ ಟೀಕೆಗೂ, ಮೆಮ್ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ರೈಲಿನಲ್ಲಿ ನೀಡಲಾಗಿರುವ ಪವರ್ ಸಾಕೆಟ್‌ಗಳು ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಕಡಿಮೆ ವಾಟ್ ಸಾಧನಗಳ ಚಾರ್ಜಿಂಗ್‌ಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿದೆ. ಆದರೆ ಮ್ಯಾಗಿ ಮತ್ತು ಚಹಾ ಮಾಡಲು ಬಳಸುವ ಎಲೆಕ್ಟ್ರಿಕ್ ಕೆಟಲ್‌ಗಳು ಹೆಚ್ಚಿನ ವಿದ್ಯುತ್ ಸೆಳೆಯುತ್ತವೆ, ಇದರಿಂದ — ಶಾರ್ಟ್ ಸರ್ಕ್ಯೂಟ್, ಫ್ಯೂಸ್ ಬ್ಲಾಸ್ಟ್, ಬೆಂಕಿ ಅವಘಡ. ಸಂಪೂರ್ಣ ಬೋಗಿಯ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸೆಂಟ್ರಲ್ ರೈಲ್ವೆಯಿಂದ ಅಧಿಕೃತ ಎಚ್ಚರಿಕೆ: ವೀಡಿಯೊ ವೈರಲ್ ಆದ ಕೆಲವು ಗಂಟೆಗಳಲ್ಲೇ ಸೆಂಟ್ರಲ್ ರೈಲ್ವೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿ “Trainನಲ್ಲಿ Electric Kettle, Induction Stove, High Voltage Appliances ಬಳಸುವುದು STRICTLY PROHIBITED. ಇದು ಅಪಾಯಕಾರಿಯಾಗಿದ್ದು, ನಿಯಮ ಉಲ್ಲಂಘನೆಯಾಗಿದೆ.” ಮಹಿಳೆ ಹಾಗೂ ಈ ಘಟನೆ ಚಿತ್ರೀಕರಿಸಿದ ಯೂಟ್ಯೂಬ್‌ ಚಾನಲ್ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.

ರೈಲಿನಲ್ಲಿ ಆಹಾರದ ವ್ಯವಸ್ಥೆ ಇದೆ — ನಿಯಮ ಪಾಲನೆ ಕಡ್ಡಾಯ: ರೈಲ್ವೆ ಇಲಾಖೆ ಹೇಳಿರುವಂತೆ ಪ್ರಯಾಣಿಕರು ಸ್ವಯಂ ಅಡುಗೆ ಮಾಡಬಾರದು. ಅಪಾಯಕಾರಿ ಸಾಧನಗಳನ್ನು ಬಳಸಬಾರದು. ಬದಲಿಗೆ IRCTC ನಲ್ಲಿರುವ ಆಹಾರ ಅಥವಾ pantry ಸೇವೆ ಬಳಸಬಹುದು ಎಂದು ತಿಳಿಸಿದೆ.

Previous articleಉದಯಪುರವು ಅಮೆರಿಕದ ಬಿಲಿಯನೇರ್ ಮಗಳ ಅದ್ದೂರಿ ವಿವಾಹಕ್ಕೆ ತಯಾರಿ: ಅತಿಥಿಯಾಗಿ ಟ್ರಂಪ್ ಜೂನಿಯರ್
Next articleKSCA ಎಲೆಕ್ಷನ್ ಕಿಚ್ಚು: ‘ಕುಂಬ್ಳೆ-ಶ್ರೀನಾಥ್ ಮಾಡೋದು ಸರಿನಾ?’ – ಮೌನ ಮುರಿದ ಬ್ರಿಜೇಶ್ ಪಟೇಲ್!

LEAVE A REPLY

Please enter your comment!
Please enter your name here