ಸಾಲಬಾಧೆ ಶಂಕೆ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

0
6

ಧಾರವಾಡ: ಸಾಲಬಾಧೆ ಶಂಕೆ ಹಿನ್ನೆಲೆ ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಲ್ಲಿಗವಾಡ ಗ್ರಾಮದ ನಾರಾಯಣ ಶಿಂಧೆ (42), ಈತನ ತಂದೆ ವಿಠ್ಠಲ ಶಿಂಧೆ (80) ಹಾಗೂ ನಾರಾಯಣನ ಮಕ್ಕಳಾದ ಶಿವಕುಮಾರ ಶಿಂಧೆ (12), ಶ್ರೀನಿಧಿ ಶಿಂಧೆ (11) ಎಂಬುವವರು ಅದೇ ಗ್ರಾಮದ ಯಲ್ಲಮ್ಮ ದೇವಾಲಯದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ನಾಲ್ಕೂ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleವಿಶ್ವಕಪ್ ಗೆದ್ದ ಅಂಗಳದಲ್ಲೇ ಮಂಡಿಯೂರಿ ಪ್ರೇಮ ನಿವೇದನೆ: ಕಣ್ಣೀರಾದ ಸ್ಮೃತಿ ಮಂದಾನ, ಮದುವೆ ದಿನಾಂಕ ಫಿಕ್ಸ್!
Next articleಜಗತ್ತಿನ ಶ್ರೇಷ್ಠ ನಗರಗಳ ಪಟ್ಟಿಯಲ್ಲಿ ‘ನಮ್ಮ ಬೆಂಗಳೂರು’: ಲಂಡನ್, ಪ್ಯಾರಿಸ್ ಸಾಲಿಗೆ ಸೇರಿದ ಸಿಲಿಕಾನ್ ಸಿಟಿ!

LEAVE A REPLY

Please enter your comment!
Please enter your name here