ರ‍್ಯಾಪಿಡ್ ರಸ್ತೆ ವಿಮರ್ಶೆ ವರದಿಗೆ ₹23 ಲಕ್ಷ

0
25
ರ‍್ಯಾಪಿಡ್ ರಸ್ತೆ

ಬೆಂಗಳೂರು: ದೇಶದ ಪ್ರಪ್ರಥಮ ಎಂಬ ಹಿರಿಮೆಗೆ ಪಾತ್ರವಾಗಿದ್ದ ನಗರದ ರ‍್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ತೀರ್ಮಾನಿಸಿತ್ತು. ಪ್ರಾಯೋಗಿಕವಾಗಿ ನಗರದ ಹೊರ ವಲಯದಲ್ಲಿ ರ‍್ಯಾಪಿಡ್ ರಸ್ತೆ ನಿರ್ಮಿಸಲಾಗಿತ್ತು.
ಬೆಂಗಳೂರಿನ ‘ರ‍್ಯಾಪಿಡ್‌ ರಸ್ತೆ’ ವಿಮರ್ಶೆಯ ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಬಿಬಿಎಂಪಿ ಒಪ್ಪಿಸಿದೆ. ಈ ವರದಿ ನೀಡಲು ಬರೋಬ್ಬರಿ ₹23 ಲಕ್ಷವನ್ನು ನೀಡಲು ಬಿಬಿಎಂಪಿ ಮುಂದಾಗಿದೆ.
ಬೇರೆ ಮಾದರಿಯ ರಸ್ತೆಗಳಿಗಿಂತ ದುಬಾರಿಯಾದರೂ ಶೀಘ್ರ ನಿರ್ಮಾಣ ಮಾಡಬಹುದು ಹಾಗೂ ಬಹು ಕಾಲ ಬಾಳಿಕೆ ಬರಲಿದೆ ಎಂಬ ಕಾರಣಕ್ಕೆ ರ‍್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು.

Previous articleಸಂಗೀತ ಮಾಂತ್ರಿಕನಿಂದ ಸಂಗೀತ ರಸದೌತಣ
Next articleಅಪರಿಚಿತ ವಾಹನ ಡಿಕ್ಕಿ: ಚಿರತೆ ಧಾರುಣವಾಗಿ ಸಾವು!