ಪಾಠ ಮಾಡುವಾಗಲೇ ಹೃದಯಾಘಾತ, ಶಿಕ್ಷಕ ಸಾವು

0
1

ಕೊಪ್ಪಳ: ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಿಬೂಬಸಾಬ ಕಸಾಬ್ (59) ತರಗತಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಎಂದಿನಂತೆ ಬೆಳಗಿನ ಪ್ರಾರ್ಥನೆ ಮುಗಿಸಿ ಆಂಗ್ಲ ಮಾಧ್ಯಮದ ಒಂದನೇ ತರಗತಿಗೆ ಬೋಧನೆಗಾಗಿ ತೆರಳಿದ್ದಾರೆ. ಈ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡು ನೆಲಕ್ಕೆ ಉರುಳಿದ್ದಾರೆ.

ತಕ್ಷಣ ಎಲ್ಲ ಶಿಕ್ಷಕರು ಓಡಿ ಬಂದು ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದು ದೃಢಪಟ್ಟಿದೆ. ಶಿಕ್ಷಕನ ಸಾವಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗದಲ್ಲಿ ಮೌನ ವಾತಾವರಣ ಉಂಟಾಗಿದೆ.

Previous articleಕುಕ್ಕೆ ಸುಬ್ರಹ್ಮಣ್ಯದಲ್ಲಿ ನಯನತಾರಾ ದಂಪತಿ: ಆಶ್ಲೇಷ ನಕ್ಷತ್ರದ ಹಿನ್ನೆಲೆ – ಭಕ್ತರ ಜಮಾವಣೆ
Next articleಬಾಂಬ್ ಸ್ಫೋಟದ ವಿಷಯದಲ್ಲಿ ಕಾಂಗ್ರೆಸ್‌ ರಾಜಕೀಯ

LEAVE A REPLY

Please enter your comment!
Please enter your name here