ಮೋದಿ ನಿಂದಿಸಿದರೆ, ಸಿದ್ದರಾಮಯ್ಯಗೆ ದೊಡ್ಡ ನಾಯಕನೆಂಬ ಭ್ರಮೆ: ಈಶ್ವರಪ್ಪ ಟೀಕೆ

0
21
ಈಶ್ವರಪ್ಪ

ರಾಯಚೂರು: ನರೇಂದ್ರ ಮೋದಿಗೆ ನಿಂದಿಸಿದರೆ, ದೊಡ್ಡ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯನವರು ಇದ್ದಾರೆ. ಮೋದಿಯವರ ಹೆಸರು ಹೇಳೋ ಯೋಗ್ಯತೆಯೂ ಸಿದ್ದರಾಮಯ್ಯನವರಿಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರನ್ನು ದೇಶವೇ ಮೆಚ್ಚಿಕೊಂಡಿದೆ. ಸೂರ್ಯನಿಗೆ ಉಗುಳಿದರೆ, ವಾಪಸ್ ಮುಖಕ್ಕೆ ಬೀಳುತ್ತದೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಗೆ ತಿಳಿಯುತ್ತದೆ. ಸಿದ್ದರಾಮಯ್ಯನವರು ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದಾರೆ. ಒಂದು ರಾಜಕಾರಣಿ ಒಂದೇ ಕ್ಷೇತ್ರ ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬೇಕು. ಚಾಮುಂಡೇಶ್ವರಿಯಲ್ಲಿ ಸೋತು ಬದಾಮಿಯಲ್ಲಿ ಸೋಲಿನ ಭಯವಿದೆ ಎಂದು ತಿಳಿಸಿದರು.
ಒಂದು ಕ್ಷೇತ್ರದಲ್ಲಿ ಜನರ ಮನ ಗೆದ್ದು, ಪುನಃ ಅದೇ ಕ್ಷೇತ್ರದಲ್ಲಿ ಬಂದು ಚುನಾವಣೆಗೆ ನಿಲ್ಲಬೇಕು. ಆದರೆ, ಈಗ ಕೋಲಾರಕ್ಕೆ ಬಂದಿದ್ದಾರೆ. ಅಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ತಿಳಿದಿಲ್ಲ. ಸಿದ್ದರಾಮಯ್ಯ ತಾನೊಬ್ಬ ದೊಡ್ಡ ಲೀಡರ್ ಎಂದು ತೋರಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

Previous articleಪ್ರಧಾನಿ ನರೇಂದ್ರ ಮೋದಿಗೆ ಹುಬ್ಬಳ್ಳಿ ಜನರಿಂದ ಭವ್ಯ ಸ್ವಾಗತ
Next articleಭದ್ರತೆ ದಾಟಿ ಮೋದಿ ಕೊರಳಿಗೆ ಹಾರ ಹಾಕಲು ಬಂದ ಯುವಕ