ಕಾಲಿವುಡ್‌ನ ಜನಪ್ರಿಯ ನಟ ಅಭಿನಯ್‌ ಇನ್ನಿಲ್ಲ

0
8

ಚೆನ್ನೈ: ಕಾಲಿವುಡ್‌ನ ಜನಪ್ರಿಯ ನಟ, ಬಹುಭಾಷಾ ಕಲಾವಿದ ಅಭಿನಯ್‌ ಸೋಮವಾರ ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದ ಲಿವರ್‌ಗೆ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾದರು.

ಇನ್ನು ಕೆಲ ದಿನಗಳ ಹಿಂದಷ್ಟೇ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ವಿಡಿಯೊ ಮೂಲಕ ಅಭಿನಯ್‌ ಮನವಿ ಮಾಡಿದ್ದರು. ಸದ್ಯ ಮೃತದೇಹವನ್ನು ಅವರ ಚೆನ್ನೈ ನಿವಾಸದಲ್ಲಿ ಇರಿಸಲಾಗಿದೆ.

ಅಭಿನಯ್‌ ಸಂಬಂಧಿಕರು ಯಾರೂ ಇಲ್ಲದ ಕಾರಣ ಅವರ ಅಂತ್ಯ ಸಂಸ್ಕಾರ ನಡಿಗರ್‌ ಸಂಘದ ಪ್ರತಿನಿಧಿಗಳ ಮೇಲ್ವಿಚಾರಣೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

2002ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅಭಿನಯ್‌ ತಮ್ಮ 23 ವರ್ಷಗಳ ವೃತ್ತಿ ಜೀವನದಲ್ಲಿ ತಮಿಳು, ಮಲಯಾಳಂನ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಚಲನಚಿತ್ರದ ಜತೆಗೆ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

2014ರಲ್ಲಿ ಬಿಡುಗಡೆಯಾದ ಆದ ತಮಿಳಿನ ʼವಲ್ಲವನುಕ್ಕು ಪುಲ್ಲುಂ ಆಯುಧಮ್‌ʼ ಅಭಿನಯ್‌ ಅವರ ಕೊನೆಯ ಚಿತ್ರ. ಇದಾದ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

Previous articleಓಟವೇ ಉಸಿರು, ಬಡತನವೇ ಶತ್ರು: ಸಾಧಕ ಸಂಗಮೇಶನಿಗೆ ಬೇಕಿದೆ ಸರ್ಕಾರದ ಆಸರೆ
Next article“ಹಿಂದೂ ರಾಷ್ಟ್ರದ ಮಾತು ಬಿಡಿ, ಶಾಲೆಗಳನ್ನು ದತ್ತು ತಗೊಳ್ಳಿ”: RSSಗೆ ಪ್ರದೀಪ್ ಈಶ್ವರ್ ನೇರ ಸವಾಲು!

LEAVE A REPLY

Please enter your comment!
Please enter your name here