ನವದೆಹಲಿ: ಭಾರತದ ರಾಜಕೀಯ ಅಂಗಳದಲ್ಲಿ ಎದ್ದಿರುವ ‘ಮತ ಕಳ್ಳತನ’ದ ಬಿರುಗಾಳಿಗೆ ಬ್ರೆಜಿಲ್‌ನಿಂದ ಅನಿರೀಕ್ಷಿತ ಉತ್ತರ ದೊರೆತಿದೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಕ್ರಮ ಎಸಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಗಂಭೀರ ಆರೋಪಕ್ಕೆ, ಸಾಕ್ಷಿಯಾಗಿ ಬಳಸಲಾಗಿದ್ದ ಬ್ರೆಜಿಲಿಯನ್ ಮಾಡೆಲ್, ಇದೀಗ ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ಭಾರತಕ್ಕೆ ಎಂದಿಗೂ ಭೇಟಿ ನೀಡಿಲ್ಲ, ನನ್ನನ್ನು ಈ ರಾಜಕೀಯದಲ್ಲಿ ಅನಗತ್ಯವಾಗಿ ಎಳೆಯಲಾಗಿದೆ,” ಎಂದು ಹೇಳಿಕೊಂಡಿದ್ದಾರೆ.
ರಾಹುಲ್ ಗಾಂಧಿ ಮಾಡಿದ್ದ ಆರೋಪವೇನು?: ಬಿಹಾರ ಚುನಾವಣೆಯ ಕಾವು ಏರುತ್ತಿರುವಾಗಲೇ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, 2024ರ ಹರಿಯಾಣ ಚುನಾವಣೆಯನ್ನು ‘ಕಳ್ಳತನ’ ಎಂದು ಬಣ್ಣಿಸಿದ್ದರು.
‘ಎಚ್-ಫೈಲ್ಸ್’ ಹೆಸರಿನಲ್ಲಿ ದಾಖಲೆಗಳನ್ನು ಮುಂದಿಟ್ಟ ಅವರು, ಸುಮಾರು 25 ಲಕ್ಷ ನಕಲಿ ಮತದಾರರನ್ನು ಸೃಷ್ಟಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಾಕ್ಷಿಯಾಗಿ, ಅವರು ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಚಿತ್ರವನ್ನು ಪ್ರದರ್ಶಿಸಿದ್ದರು
ಇದೇ ಫೋಟೋವನ್ನು ‘ಸೀಮಾ’, ‘ಸ್ವೀಟಿ’, ‘ಸರಸ್ವತಿ’ ಎಂಬ ಬೇರೆ ಬೇರೆ ಹೆಸರುಗಳಲ್ಲಿ ಬರೋಬ್ಬರಿ 22 ಬಾರಿ ಬಳಸಲಾಗಿದೆ ಎಂದು ಆರೋಪಿಸಿದ್ದರು. ಇದು ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ವೈರಲ್ ಮಾಡೆಲ್ ಲಾರಿಸ್ಸಾ ಹೇಳಿದ್ದೇನು?: ಈ ರಾಜಕೀಯ ಆರೋಪ-ಪ್ರತ್ಯಾರೋಪಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಮಾಡೆಲ್ ಲಾರಿಸ್ಸಾ, ತಮ್ಮ ಫೋಟೋ ಭಾರತದಲ್ಲಿ ವೈರಲ್ ಆಗಿರುವುದನ್ನು ಕಂಡು ದಂಗಾಗಿದ್ದಾರೆ.
ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, “ನಾನು ಈಗ ಮಾಡೆಲ್ ಆಗಿ ಕೆಲಸ ಮಾಡುತ್ತಿಲ್ಲ, ಬ್ರೆಜಿಲ್‌ನಲ್ಲಿ ಕೇಶ ವಿನ್ಯಾಸಗಾರ್ತಿ ಮತ್ತು ಡಿಜಿಟಲ್ ಪ್ರಭಾವಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಫೋಟೋ ಆನ್‌ಲೈನ್‌ನಲ್ಲಿರುವ ‘ಸ್ಟಾಕ್ ಇಮೇಜ್’ ಸಂಗ್ರಹದಿಂದ ಖರೀದಿಸಲಾಗಿದೆ. ಅದನ್ನು ಯಾರು ಬೇಕಾದರೂ ಹಣ ಪಾವತಿಸಿ ಬಳಸಬಹುದು. ಇದಕ್ಕೂ ನನಗೂ ಯಾವುದೇ ವೈಯಕ್ತಿಕ ಸಂಬಂಧವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯ ನಂತರ ತಮ್ಮ ಇನ್‌ಸ್ಟಾಗ್ರಾಂ ಖಾತೆಗೆ ಭಾರತೀಯರಿಂದ ಸಂದೇಶಗಳ ಮಹಾಪೂರವೇ ಹರಿದುಬಂದಿದೆ ಎಂದು ಲಾರಿಸ್ಸಾ ಹೇಳಿದ್ದಾರೆ.
“ಜನರು ನನ್ನನ್ನೇ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಭಾವಿಸಿ ಕಾಮೆಂಟ್ ಮಾಡುತ್ತಿದ್ದಾರೆ. ದಯವಿಟ್ಟು ಅರ್ಥಮಾಡಿಕೊಳ್ಳಿ, ಅದು ನನ್ನ ಫೋಟೋ ಮಾತ್ರ, ನಾನಲ್ಲ,” ಎಂದು ಮನವಿ ಮಾಡಿದ್ದಾರೆ.
ತಮಾಷೆಯಾಗಿ, “ನನಗೆ ಹಿಂದಿಯಲ್ಲಿ ‘ನಮಸ್ತೆ’ ಎನ್ನುವುದು ಮಾತ್ರ ಗೊತ್ತು, ಬಹುಶಃ ಇನ್ನು ಕೆಲವು ಪದಗಳನ್ನು ಕಲಿಯಬೇಕಾಗುತ್ತದೆ,” ಎಂದು ನಗುತ್ತಾ ಹೇಳಿದ್ದಾರೆ.
ಹರಿಯಾಣದ ಗಂಭೀರ ರಾಜಕೀಯ ಆರೋಪವೊಂದು, ಅಂತರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿ, ಅನಿರೀಕ್ಷಿತ ತಿರುವು ಪಡೆದುಕೊಂಡಿರುವುದು ವಿಪರ್ಯಾಸ. ರಾಜಕೀಯ ಪಕ್ಷಗಳ ಸಮರ ಮುಂದುವರಿದಿದ್ದರೆ, ಈ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದ ವಿದೇಶಿ ಮಹಿಳೆಯೊಬ್ಬರು ದಿಢೀರ್ ಸುದ್ದಿಯಾಗಿದ್ದಾರೆ.























masim5
Can you be more specific about the content of your article? After reading it, I still have some doubts. Hope you can help me. https://accounts.binance.info/vi/register?ref=MFN0EVO1