ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದ ಕೇಂದ್ರ ಸಚಿವ ಜೋಶಿ

0
38
ಜೋಶಿ

ಹುಬ್ಬಳ್ಳಿ: ಯುವಜನೋತ್ಸವಕ್ಕೆ ನಿರೀಕ್ಷೆ ಮೀರಿ ಯುವಕರು ನೋಂದಣಿ ಮಾಡಿಸಿದ್ದಾರೆ. ನ ಭೂತೊ ಎಂಬುವ ರೀತಿ ಸ್ಪಂದನೆ ದೊರಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.
ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆಗೆ ಆಗಮಿಸುತ್ತಿರುವುದರಿಂದ ಸಾರ್ವಜನಿಕರು, ಅಭಿಮಾನಿಗಳು ಅವರನ್ನು ನೋಡಲು ಬರುತ್ತಿದ್ದಾರೆ. ಹೀಗಾಗಿ, ವಿಮಾನ ನಿಲ್ದಾಣದಿಂದ ಬರುವಾಗ ಮಾರ್ಗದಲ್ಲಿ 7-8 ಕಡೆಗಳಲ್ಲಿ ಪ್ರಧಾನಿಯವರು ಸಾರ್ವಜನಿಕರ ಭಾವನೆಗೆ ಸ್ಪಂದಿಸಲಿದ್ದಾರೆ ಎಂದರು.
ಉದ್ದೇಶಪೂರ್ವಕವಾಗಿ ಹೆಸರು ಬಿಟ್ಟಿಲ್ಲ:
ವೇದಿಕೆ ಕಾರ್ಯಕ್ರಮದಲ್ಲಿ ಯಾರು ಇರಬೇಕು ಎಂಬುದನ್ನು ಪ್ರಧಾನಿಯವರ ಕಚೇರಿ ನಿರ್ಧರಿಸುತ್ತದೆ. ನಮ್ಮ ಕಚೇರಿಯಿಂದ ಮತ್ತು ಜಿಲ್ಲಾಡಳಿತ ಕಚೇರಿಯಿಂದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಹೆಸರನ್ನು ಪ್ರಧಾನಿ ಕಚೇರಿಗೆ ಕಳಿಸಲಾಗಿತ್ತು. ಆದರೆ ಅಲ್ಲಿಂದ ಬಂದ ಪತ್ರದಲ್ಲಿ ಶಾಸಕರು ಹೆಸರು ಇರಲಿಲ್ಲ ಎಂಬುದು ಗೊತ್ತಾಯಿತು. ಪುನಃ ನಾನು ಪ್ರಧಾನಿಯವರ ಕಚೇರಿಗೆ ಮನವರಿಕೆ ಮಾಡಿದ್ದು, ಶಾಸಕರೂ ಉದ್ಘಾಟನೆ ಕಾರ್ಯಕ್ರಮದ ವೇದಿಕೆಯಲ್ಲಿ ಇರುತ್ತಾರೆ ಎಂದರು.

Previous articleಮಂತ್ರಾಲಯದ ಶ್ರೀರಾಯರ ಮಠಕ್ಕೆ ವಿವಿಧ ಮಠಾಧೀಶರು ಭೇಟಿ
Next articleಹೆತ್ತ ಮಕ್ಕಳಿಗೆ ವಿಷವಿಕ್ಕಿ ತಾನೂ ಇಹಲೋಕ ತ್ಯಜಿಸಿದ ತಾಯಿ