Home Advertisement
Home ನಮ್ಮ ಜಿಲ್ಲೆ ಉಡುಪಿ ರಸ್ತೆ ಅಪಘಾತದಲ್ಲಿ ಎಎಸ್ಐ ಪುತ್ರಿ ಸಾವು

ರಸ್ತೆ ಅಪಘಾತದಲ್ಲಿ ಎಎಸ್ಐ ಪುತ್ರಿ ಸಾವು

0
118

ಸಂ.ಕ. ಸಮಾಚಾರ, ಉಡುಪಿ: ಇಲ್ಲಿನ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರ ಕೆಎಸ್‌ಆರ್‌ಟಿಸಿ ಡಿಪೊ ಬಳಿ ಅ.26ರಂದು ರಾತ್ರಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹ ಸವಾರೆ ಮೃತಪಟ್ಟ ಘಟನೆ ನಡೆದಿದ್ದು, ಮೃತರನ್ನು ಶಿರ್ವ ಪೊಲೀಸ್ ಠಾಣೆ ಎಎಸ್ಐ ಸುದೇಶ್ ಶೆಟ್ಟಿ ಪುತ್ರಿ ಸ್ಪರ್ಷ (24) ಎಂದು ಗುರುತಿಸಲಾಗಿದೆ. ಮೃತರ ತಾಯಿ ಶರ್ಮಿಳಾ (49) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾವಳಿ ಬೈಪಾಸ್ ಕಡೆಯಿಂದ ಸಂತೆಕಟ್ಟೆ ಕಡೆಗೆ ಸಾಗುತ್ತಿದ್ದ ಕಾರು ಎದುರಿನಿಂದ ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ಈರ್ವರು ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಗಾಯಗೊಂಡ ಶರ್ಮಿಳಾ ಮತ್ತು ಸ್ಪರ್ಷ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಗಂಭೀರ ಗಾಯಗೊಂಡ ಸ್ಪರ್ಷ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಚಿಪ್ ಚಕಮಕಿ: ಪ್ರಿಯಾಂಕ್‌ಗೆ “ಫಸ್ಟ್ ಕ್ಲಾಸ್ ಈಡಿಯಟ್” ಎಂದ ಅಸ್ಸಾಂ ಮುಖ್ಯಮಂತ್ರಿ!
Next articleಬೆಂಗಳೂರು: ಡೆಲಿವರಿ ನೆಪದಲ್ಲಿ ವಿದೇಶಿ ಮಾಡೆಲ್‌ಗೆ ಕಾಮುಕನ ಅಟ್ಟಹಾಸ!

LEAVE A REPLY

Please enter your comment!
Please enter your name here