ವಿಜಯನಗರ: ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಹಲವರು ಅಸ್ವಸ್ಥ

0
16
ನೀರು

ವಿಜಯನಗರ: ಕಲುಷಿತ ನೀರು ಸೇವಿಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆಯ ರಾಣಿಪೇಟೆಯಲ್ಲಿ ಬುಧವಾರ ನಡೆದಿದೆ.
ರಾಣಿಪೇಟೆ ನಿವಾಸಿ ಲಕ್ಷ್ಮೀ (55) ಮೃತ ಮಹಿಳೆಯಾಗಿದ್ದಾರೆ. ಚಲವಾದಿ ಕೇರಿ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ನೀರು ಕಲುಷಿತಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಕುಡಿಯುವ ನೀರು ಕಲುಷಿತವಾಗಿರುವುದು ಗೊತ್ತಾಗದೇ ನೀರು ಸೇವಿಸಿದ ಪರಿಣಾಮ 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರಲ್ಲಿ ಓರ್ವ ಮಹಿಳೆ ಲಕ್ಷ್ಮೀ ಎಂಬುವವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಅಸ್ವಸ್ಥರಾಗಿರುವವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ.

Previous articleಪ್ರಧಾನಿ ಆಗಮನ: ಹುಬ್ಬಳ್ಳಿಯಲ್ಲಿ ಬದಲಾದ ಸಂಚಾರ ಮಾರ್ಗ
Next articleಬೆಳಗಾವಿಯಲ್ಲಿ ʼಪ್ರಜಾಧ್ವನಿ’ ಕಾಂಗ್ರೆಸ್‌ ಯಾತ್ರೆಗೆ ಚಾಲನೆ