ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ಸಾವು

0
20


ಹುಬ್ಬಳ್ಳಿ : ಕಳೆದ ಮಂಗಳವಾರ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ವೀರಾಪುರ ಓಣಿಯಲ್ಲಿನ ಕರಿಯಮ್ಮ ದೇವಸ್ಥಾನದಲ್ಲಿನ ಅಯ್ಯಪ್ಪಸ್ವಾಮಿ ಮಾಲಾದಾರಿಗಳು ಉಪಯೋಗಿಸುತ್ತಿದ್ದ ಸಿಲಿಂಡರ್ ಅನಿಲ ಸೋರಿಕೆಯಿಂದಾಗಿ ಏಕಾಏಕಿ ಸ್ಫೋಟಗೊಂಡಿತ್ತು. ಈ ಪರಿಣಾಮ ಮಗು ಸೇರಿದಂತೆ ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದರು.
ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಯತಿ ಬಿಜವಾಡ(೪) ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಮೃತಪಟ್ಟಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಜಿಲ್ಲೆಯಾದ್ಯಂತ ಚಳಿ ಚಳಿ…. ಸಂಜೆಯಷ್ಟೊತ್ತಿಗೆ ಮುದುಡಿದ ಜನ
Next articleಇಸ್ಪೀಟ್ ಆಡುತ್ತಿದ್ದ 17 ಜನರ ಬಂಧನ