ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ಯುವಜನತೆಗೆ ಬಿಎಫ್ಎಸ್ಐ ಉದ್ಯೋಗ ಕೌಶಲ್ಯ ಒದಗಿಸಲು ಅಹಾನ್ ವೊಕೇಶನಲ್ ಸೆಂಟರ್

0
17

ಬೆಂಗಳೂರು: ಅಪೆಕ್ಸಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ದಿ ಮಾ ಫಾಯ್ ಫೌಂಡೇಶನ್‌ ನೇತೃತ್ವದಲ್ಲಿ ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ವರ್ಗದ ತರುಣ, ತರುಣಿಯರ ವೃತ್ತಿ ಜೀವನಕ್ಕೆ ನೆರವಾಗುವ ಬಿಎಫ್ಎಸ್ಐ (ಬ್ಯಾಂಕಿಂಗ್, ಫೈನಾನ್ಸ್ ಸರ್ವೀಸಸ್ ಮತ್ತು ಇನ್ಶೂರೆನ್ಸ್) ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಕೆ.ಆರ್. ಪುರಂನ ಡಾನ್ ಬಾಸ್ಕೋ ಕಾಲೇಜಿನಲ್ಲಿ ‘ಅಹಾನ್ ವೊಕೇಶನಲ್ ಸೆಂಟರ್: ಬಿಎಫ್ಎಸ್ಐ’ ಅನ್ನು ಆರಂಭಿಸಿದೆ.

ಬೆಂಗಳೂರಿನ ವಿದ್ಯಾರ್ಥಿಗಳಿಗೆ ಉದ್ಯಮ ಸಂಬಂಧಿ ತರಬೇತಿ, ಜೀವನ ಕೌಶಲಗಳು ಮತ್ತು ಬಿಎಫ್ಎಸ್ಐಕ್ಷೇತ್ರದಲ್ಲಿ ವೃತ್ತಿ ಹೊಂದಲು ಬೇಕಾದ ತರಬೇತಿ ಒದಗಿಸುವಂತೆ ವಿನ್ಯಾಸಗೊಳಿಸಲಾದ ಈ ಯೋಜನೆಯಮೊದಲ ಹಂತದಲ್ಲಿ ಅಂತಿಮ ವರ್ಷದ ಪದವಿ ತರಗತಿಯಲ್ಲಿರುವ 220 ಮಂದಿಗೆ ಬಿಎಫ್ಎಸ್ಐಉದ್ಯೋಗ ಕೌಶಲ್ಯಗಳನ್ನು ಒದಗಿಸಲಾಗುತ್ತದೆ. ವಿಶೇಷವೆಂದರೆ ಈ ಯೋಜನೆಯಲ್ಲಿ ಶೇ.60ರಷ್ಟು ವಿದ್ಯಾರ್ಥಿನಿಯರಿಗೆ ತರಬೇತಿ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು ನೀಡಲಾಗಿದೆ.

ವಿದ್ಯಾರ್ಥಿಗಳ ಬೆಳವಣಿಗೆಗೆ ಸಮಗ್ರ ವಿಧಾನವನ್ನು ಅನುಸರಿಸಲಾಗುತ್ತಿದ್ದು, ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ತಜ್ಞರಿಂದ ಕಾರ್ಯಾಗಾರಗಳು, ಇಂಟರ್ನ್‌ ಶಿಪ್‌ಗಳು ಮತ್ತು ವೈಯಕ್ತಿಕ ಮಾರ್ಗದರ್ಶನ ಒದಗಿಸಲಾಗುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಅಪೆಕ್ಸಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ದಿ ಮಾ ಫಾಯ್ ಫೌಂಡೇಶನ್‌ನ ಹಿರಿಯ ಪ್ರತಿನಿಧಿಗಳು, ಪಾಲುದಾರರು, ಕಾಲೇಜಿನ ಗಣ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪೆಕ್ಸಾನ್‌ ನ ಗ್ಲೋಬಲ್ ಸಿಎಫ್ಓಮತ್ತು ಮುಖ್ಯ ಆಡಳಿತಾಧಿಕಾರಿ ವಿನು ವೆಂಕಟೇಶ್ ಅವರು, “ಈ ಪಾಲುದಾರಿಕೆಯ ಮೂಲಕ ಯುವ ಜನತೆಗೆ ಉದ್ಯೋಗಾವಕಾಶ ಹೊಂದುವ ಸಾಮರ್ಥ್ಯ ಹೆಚ್ಚಿಸುವ ಮತ್ತು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ಉಂಟುಮಾಡುವ ಬದ್ಧತೆಯನ್ನು ಅಪೆಕ್ಸಾನ್ ಸಾರಿದೆ. ಕೌಶಲ್ಯ ಅಭಿವೃದ್ಧಿಯು ಸುಸ್ಥಿರ ಆರ್ಥಿಕ ಬೆಳವಣಿಗೆಯ ಭದ್ರ ಬುನಾದಿ ಎಂಬುದು ನಮ್ಮ ಭಾವನೆಯಾಗಿದೆ” ಎಂದು ಹೇಳಿದರು.

ದಿ ಮಾ ಫಾಯ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಹೇಮಲತಾ ರಾಜನ್ ಅವರು, “ಸುಸ್ಥಿರ ಜೀವನೋಪಾಯ ವ್ಯವಸ್ಥೆ ರೂಪಿಸುವ ನಮ್ಮ ದೃಷ್ಟಿಗೆ ಪೂರಕವಾಗಿ ಈ ಪಾಲುದಾರಿಕೆ ಮೂಡಿ ಬಂದಿದೆ. ಯುವಜನತೆಗೆ ಗುಣಮಟ್ಟದ ಕೌಶಲ್ಯ ತರಬೇತಿ ಒದಗಿಸುವ ಮೂಲಕನಾವು ಅನೇಕರಿಗೆ ಭವ್ಯ ಭವಿಷ್ಯದ ಬಾಗಿಲು ತೆರೆಯುತ್ತಿದ್ದೇವೆ” ಎಂದು ತಿಳಿಸಿದರು.

ಅಹಾನ್ ವೊಕೇಶನಲ್ ಸೆಂಟರ್: ಬಿಎಫ್ಎಸ್ಐ ಎಂಬುದು ಯುವಜನತೆಯ ಬೆಳವಣಿಗೆಗಾಗಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಏಪೆಕ್ಸಾನ್ ಮತ್ತು ದ ಮಾಫಾಯ್ ಫೌಂಡೇಶನ್‌ ಗಳ ದೃಷ್ಟಿಕೋನಕ್ಕೆ ಉತ್ತಮ ಸಾಕ್ಷಿಯಾಗಿದೆ. ಕಾರ್ಪೊರೇಟ್ ಹೊಣೆಗಾರಿಕೆಯನ್ನು ಪ್ರಾದೇಶಿಕ ಪರಿಣಾಮ ಬೀರುವ ಕ್ರಮಗಳ ಜೊತೆ ಸಂಯೋಜಿಸುವ ಮೂಲಕ ಈ ಯೋಜನೆಯು ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಸ್ವಾವಲಂಬಿ ಮತ್ತು ಸ್ಥಿರ ಸಮುದಾಯಗಳನ್ನು ನಿರ್ಮಿಸುವ ವಿಶಾಲ ಉದ್ದೇಶ ಸಾಕಾರಕ್ಕೂ ಕೊಡುಗೆ ನೀಡುತ್ತದೆ.

Previous articleಐದು ವರ್ಷಗಳ ಹಳೆಯ ಸೈಬರ್ ವಂಚನೆ ಬಯಲು: ಹಣ ಮರುಪಾವತಿ!

LEAVE A REPLY

Please enter your comment!
Please enter your name here