ಶಾಸಕ ಮುನಿರತ್ನ RSSಗೆ ಅಗೌರವ ತಂದಿದ್ದಾರೆ: ಡಿ. ಕೆ. ಶಿವಕುಮಾರ್

0
86

ಬೆಂಗಳೂರು: “ಶಾಸಕ ಮುನಿರತ್ನ ಆರ್‌ಎಸ್‌ಎಸ್ (RSS) ಗೆ ಅಗೌರವ ತಂದಿದ್ದಾರೆ. ಗಣವೇಷ ಧರಿಸಿ ನಡತೆ ಕಳೆದುಕೊಳ್ಳುವ ರೀತಿಯಲ್ಲಿ ವರ್ತಿಸಿರುವುದು ಶತಮಾನೋತ್ಸವದ ಸಂದರ್ಭದಲ್ಲಿಯೇ ಅಶೋಭನೀಯ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ರವಿವಾರ ನಡೆದ “ಬೆಂಗಳೂರು ನಡಿಗೆ” ಕಾರ್ಯಕ್ರಮದ ವೇಳೆ ಮತ್ತಿಕೆರೆ ಜೆಪಿ ಪಾರ್ಕ್ ಪ್ರದೇಶದಲ್ಲಿ ನಡೆದ ಹೈ ಡ್ರಾಮಾದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಹೈಡ್ರಾಮಾದ ಹಿನ್ನಲೆ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿದ್ದ “ಬೆಂಗಳೂರು ನಡಿಗೆ” ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂಬ ಆರೋಪದೊಂದಿಗೆ ಬಿಜೆಪಿ ಶಾಸಕ ಮುನಿರತ್ನ ವೇದಿಕೆಯಲ್ಲಿ ಪ್ರತಿಭಟಿಸಿದ್ದರು. ಅವರು ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, “ಇದು ಯಾವುದೇ ಅಭಿವೃದ್ಧಿ ಯೋಜನೆಯ ಉದ್ಘಾಟನೆ ಅಥವಾ ಶಿಲಾನ್ಯಾಸ ಕಾರ್ಯಕ್ರಮವಲ್ಲ. ಜನರ ಅಹವಾಲುಗಳನ್ನು ಆಲಿಸಲು ಹಮ್ಮಿಕೊಂಡ ನಡಿಗೆ ಕಾರ್ಯಕ್ರಮ ಮಾತ್ರ. ಎಲ್ಲರಿಗೂ ಆಹ್ವಾನ ನೀಡಲಾಗಿತ್ತು,” ಎಂದರು.

ಆರ್‌ಎಸ್‌ಎಸ್ ಶತಮಾನೋತ್ಸವದ ವೇಳೆ ಈ ವರ್ತನೆ ಸರಿಯಲ್ಲ: ಡಿಕೆಶಿ ಮುಂದುವರಿದು, “ಆರ್‌ಎಸ್‌ಎಸ್ ಶತಮಾನೋತ್ಸವದ ಸಂದರ್ಭದಲ್ಲಿ ಶಾಸಕರಾದ ಮುನಿರತ್ನ ಅವರು ಗಣವೇಷ ಧರಿಸಿ ಬಂದು ಮಾಡಿದ ವರ್ತನೆ ಆರ್‌ಎಸ್‌ಎಸ್‌ಗೆ ಅವಮಾನ. ತಮ್ಮ ಕ್ರಿಯೆಯಿಂದ ಅವರು ಆ ಸಂಘಟನೆಯ ಗೌರವಕ್ಕೆ ಧಕ್ಕೆಯುಂಟುಮಾಡಿದ್ದಾರೆ,” ಇಂತಹ ವರ್ತನೆ ಮಾಡುವವರನ್ನು ಗೆಲ್ಲಿಸಿದ್ದು ಜನರ ತಪ್ಪು, ಮುಂದಿನ ಬಾರಿ ಜನರು ಸರಿಪಡಿಸಿಕೊಳ್ಳಬೇಕು ಎಂದರು.

ಜನರ ಸಮಸ್ಯೆ ಆಲಿಸಲು ನಡಿಗೆ — ರಾಜಕೀಯಕ್ಕಲ್ಲ: ಉಪಮುಖ್ಯಮಂತ್ರಿ ಕಾರ್ಯಕ್ರಮದ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ, “ಈ ನಡಿಗೆ ಯಾವುದೇ ರಾಜಕೀಯ ವೇದಿಕೆ ಅಲ್ಲ. ಇದು ಜನರ ಸಮಸ್ಯೆ ಆಲಿಸುವ ವೇದಿಕೆ. ಎಲ್ಲರಿಗೂ ಗೌರವ ನೀಡಲಾಗಿದೆ. ಆದರೆ ಕೆಲವರಿಗೆ ತಾಳ್ಮೆ ಇಲ್ಲ, ಬೆಳಗ್ಗೆ ಎರಡು ಗಂಟೆ ಕಾಲ ಜನರ ಜೊತೆ ನಡೆದು ಅನೇಕ ಸಮಸ್ಯೆಗಳನ್ನು ಕೇಳಿದ್ದೇನೆ. ಪ್ರತಿಯೊಬ್ಬರೂ ತಮ್ಮ ಸಮಸ್ಯೆ ಹೇಳಬಹುದು. ಬಗೆಹರಿಸುವ ಭರವಸೆ ಸರ್ಕಾರದ್ದು ಎಂದರು.

Previous articleಕ್ಯಾಲಿಫೋರ್ನಿಯಾ: ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ಅಪಘಾತ
Next articleರಾಯಚೂರು: ಸಿಎಂ ಅಧಿಕಾರ ಹಂಚಿಕೆಯ ಚರ್ಚೆ ನಡೆದಿಲ್ಲ-ಯತ್ರೀಂದ್ರ

LEAVE A REPLY

Please enter your comment!
Please enter your name here