ದೇವದುರ್ಗ ಶಾಸಕರ ಕಾರು ಅಪಘಾತ

0
61

ರಾಯಚೂರು: ದೇವದುರ್ಗ ಶಾಸಕರಾದ ಕರಿಯಮ್ಮ ನಾಯಕ ಅವರ ಕಾರು ಅಪಘಾತವಾಗಿರುವ ಘಟನೆ ಭಾನುವಾರ ಜೇವರ್ಗಿ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ತಿಂಥಣಿ ಸೇತುವೆ ಬಳಿ ನಡೆದಿದೆ. ಶಾಸಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಶಾಸಕಿ ಕರಿಯಮ್ಮ ಜಿ ನಾಯಕ ದೇವದುರ್ಗದಿಂದ ಹುಬ್ಬಳ್ಳಿಗೆ ಮದುವೆ ಸಮಾರಂಭ ಭಾಗವಹಿಸಲು ತೆರಳುತ್ತಿದ್ದರು. ಲಿಂಗಸಗೂರು ಮಾರ್ಗ ಕಡೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ.

ಘಟನೆಗೆ ಕಾರಣ : ಶಾಸಕಿಯ ಕಾರಿನ ಜೊತೆಗೆ ಬೆಂಬಲಿಗರ ಕಾರೊಂದು ಮುಂದೆ ತೆರಳುತ್ತಿತ್ತು. ಶಾಸಕರ ಕಾರಿನ ಮುಂದೆ ಅವರ ಬೆಂಬಲಿಗರ ಕಾರು ತೆರಳುತ್ತಿತ್ತು. ಬೆಂಬಲಿಗರ ಕಾರಿಗೆ ನಾಯಿ ಅಡ್ಡ ಬಂದಾಗ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂದೆ ಇದ್ದ ಶಾಸಕಿ ಕಾರು ಡಿಕ್ಕಿ ಹೊಡೆದಿದೆ. ಈ ಡಿಕ್ಕಿ ರಭಸಕ್ಕೆ ಶಾಸಕಿಗೆ ಕೈ.ಕಾಲು. ತಲೆಗೆ ಸಣ್ಣ-ಪುಟ್ಟ ಗಾಯಗಳಾಗಿ ಲಿಂಗಸಗೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಪುನಃ ಹುಬ್ಬಳ್ಳಿ ಗೆ ಬೇರೊಂದು ಕಾರಿನಲ್ಲಿ ಪ್ರಯಾಣ ಬೆಳಸಿದ್ದಾರೆ ಎಂದು ತಿಳಿದುಬಂದಿದೆ.

Previous articleAI ಬಳಸಿ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆ ಯಶಸ್ವಿ
Next articleಕ್ಯಾಲಿಫೋರ್ನಿಯಾ: ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ಅಪಘಾತ

LEAVE A REPLY

Please enter your comment!
Please enter your name here