ಮೈಸೂರು: ದಸರಾ ವಸ್ತುಪ್ರದರ್ಶನ ಬಳಿ ರೌಡಿಶೀಟರ್ ಬರ್ಬರ ಹತ್ಯೆ,  ಸೇಡಿನ ಕೊಲೆಯೇ?

0
34

ಮೈಸೂರಿನ ದಸರಾ ವಸ್ತುಪ್ರದರ್ಶನ ಸಮೀಪ ಹಾಡಹಗಲೇ ರೌಡಿಶೀಟರ್ ವೆಂಕಟೇಶ್ ಅಲಿಯಾಸ್ ಮುಖಾಮುಚ್ಚಿ ಅಲಿಯಾಸ್ ಗಿಲಿಗಿಲಿ ಎಂಬಾತನನ್ನು ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.  
 
ಕಾರಿನಲ್ಲಿ ಬರುತ್ತಿದ್ದ ವೆಂಕಟೇಶ್‌ನನ್ನು ತಡೆದ ಯುವಕರು, ಆತನನ್ನು ಹೊರಗೆ ಎಳೆದು ಲಾಂಗ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಲೆ, ಕೈ, ಕಾಲು ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸ್ಥಳದಲ್ಲೇ ವೆಂಕಟೇಶ್ ಸಾವನ್ನಪ್ಪಿದ್ದಾನೆ.  
 
ಇತ್ತೀಚೆಗೆ ವರುಣಾ ಗ್ರಾಮದಲ್ಲಿ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್ ಕೊಲೆಯಾಗಿತ್ತು. ಈ ಕಾರ್ತಿಕ್ ಕೊಲೆ ಪ್ರಕರಣದಲ್ಲಿ ವೆಂಕಟೇಶ್ ಸಹಕಾರ ನೀಡಿದ್ದ ಎಂಬ ಮಾತುಗಳು ಕೇಳಿಬಂದಿದ್ದವು. ಹಾಗಾಗಿ, ಇದು ಕಾರ್ತಿಕ್ ಕಡೆಯವರಿಂದ ನಡೆದ ಸೇಡಿನ ಕೊಲೆ ಎಂದು ಶಂಕಿಸಲಾಗಿದೆ.  
 
ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಜರಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.  

Previous article‘ಕಾಂತಾರ’ ಪ್ರೇರಣೆಯ ವಿಚಿತ್ರ ವರ್ತನೆಗಳು: ರಿಷಬ್ ಶೆಟ್ಟಿಗೆ ತುಳುಕೂಟದ ಆತಂಕ!
Next articleಕಿತ್ತೂರು ಉತ್ಸವ-2025: ದಿನಾಂಕ ಘೋಷಣೆ, 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ

LEAVE A REPLY

Please enter your comment!
Please enter your name here