ಜುಬಿನ್‌ಗೆ ವಿಷ ಕುಡಿಸಿದ್ದ ಮ್ಯಾನೇಜರ್, ಆಯೋಜಕ..?

1
91

ಗುವಾಹಟಿ: ಖ್ಯಾತ ಗಾಯಕ, ದಿವಂಗತ ಜುಬಿನ್ ಗಾರ್ಗ್ ಸಾವಿನ ಪ್ರಕರಣದಲ್ಲಿ ಈಗ ಹೊಸ ತಿರುವೊಂದು ದೊರಕಿದ್ದು ಮ್ಯಾನೇಜರ್ ಸಿದ್ದಾರ್ಥ್ ಶರ್ಮಾ ಹಾಗೂ ಸಂಗೀತ ಕಾರ್ಯಕ್ರಮಗಳ ಆಯೋಜಕ ಶ್ಯಾಮಕಾನು ಮಹಾಂತ್ ಅವರು ಗಾರ್ಗ್‌ಗೆ ವಿಷಪ್ರಾಶನ ಮಾಡಿ ಅವರ ಸಾವನ್ನು ಆಕಸ್ಮಿಕ ಎಂದು ಮುಚ್ಚಿಹಾಕಲು ಸಂಚು ರೂಪಿಸಿರಬಹುದು ಎಂದು ಬ್ಯಾಂಡ್ ತಂಡದ ಶೇಖರ್ ಗೋಸ್ವಾಮಿ ಆರೋಪ ಮಾಡಿದ್ದಾರೆ.

ಸಿಂಗಾಪುರದ ಪ್ಯಾನ್ ಪೆಸಿಫಿಕ್ ಹೋಟೆಲ್‌ನಲ್ಲಿ ತಮ್ಮೊಂದಿಗೆ ತಂಗಿದ್ದ ಶರ್ಮಾ ಅನುಮಾನಾಸ್ಪದ ನಡವಳಿಕೆಯನ್ನು ಪ್ರದರ್ಶಿಸಿದ್ದರು. ದುರಂತಕ್ಕೀಡಾದ ದೋಣಿಯನ್ನು ಶರ್ಮಾ ನಾವಿಕನಿಂದ ಬಲವಂತವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿರುವುದರಿಂದ ಅದು ಸಮುದ್ರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿತು. ಹೀಗಾಗಿ ಅದರಲ್ಲಿದ್ದ ಪ್ರಯಾಣಿಕರು ಅಪಾಯ ಎದುರಿಸಬೇಕಾಯಿತು ಎಂದು ಗೋಸ್ವಾಮಿ ಹೇಳಿದ್ದಾರೆ.

ಗಾರ್ಗ್ ಉಸಿರಾಡಲು ಕಷ್ಟಪಡುತ್ತಾ ಮುಳುಗುವ ಹಂತದಲ್ಲಿ ಅವನು ಹೋದ್ರೆ ಹೋಗಲಿ ಎಂದು ಕೂಗುತ್ತಿದ್ದ. ಗಾರ್ಗ್ ಒಬ್ಬ ತರಬೇತಿ ಪಡೆದ ಈಜುಗಾರರಾಗಿದ್ದು ತಮಗೂ, ಶರ್ಮಾಗೂ ತರಬೇತಿ ನೀಡಿದ್ದರು. ಆದ್ದರಿಂದ ಅವರು ಮುಳುಗಿ ಸಾವನ್ನಪ್ಪಿರಲು ಸಾಧ್ಯವಿಲ್ಲ ಎಂದೂ ವಿವರಿಸಿದ್ದಾರೆ.

Previous articleಜೋಡೆತ್ತು ಜತೆ ಬಂದ ಚಿಕ್ಕಣ್ಣ: ಮೂರು ಭಾಷೆಯ ಬೃಹತ್ ಸಿನಿಮಾ!
Next articleಒನ್‌ಡೇ ವಿಶ್ವಕಪ್‌ ಕ್ರಿಕೆಟ್‌ಗೆ ರೋಹಿತ್‌ – ಕೊಹ್ಲಿ ಡೌಟ್

1 COMMENT

LEAVE A REPLY

Please enter your comment!
Please enter your name here