ಬೆಂಗಳೂರು: ಹಿರಿಯ ಪತ್ರಕರ್ತ ಮತ್ತು ಬರಹಗಾರ ಟಿಜೆಎಸ್ ಜಾರ್ಜ್ (ಥೈಲ್ ಜಾಕೋಬ್ ಸೋನಿ ಜಾರ್ಜ್) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಭಾರತೀಯ ಇಂಗ್ಲೀಶ್ ಪತ್ರಿಕೋದ್ಯಮದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾಗಿ ಟಿಜೆಎಸ್ ಜಾರ್ಜ್ ಅವರು 1950 ರಲ್ಲಿ ವೃತ್ತಿ ಆರಂಭಿಸಿದ್ದರು. ಫ್ರೀ ಪ್ರೆಸ್ ಜರ್ನಲ್, ಇಂಟರ್‌ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್, ಫಾರ್ ಇಸ್ಟರ್ನ್ ಇಕನಾಮಿಕ್ ರಿವ್ಯೂ ಮತ್ತು ಏಷಿಯಾ ವೀಕ್ ಹಂಗ್‌ಕಾಂಗ್‌ನ ಸ್ಥಾಪನಾ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ʻಪಾಯಿಂಟ್ ಆಫ್ ವ್ಯೂ’ ಎಂಬ ಕಾಲಮ್ ಮೂಲಕ ಸಾಮಾಜಿಕ ನ್ಯಾಯ, ಧಾರ್ಮಿಕ ಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಪರವಾಗಿ 25 ವರ್ಷಗಳ ಕಾಲ ಬರಹಗಳನ್ನು ಪ್ರಕಟಿಸಿದರು. 2008ರಲ್ಲಿ ಚೀನಾದ ಒಲಿಂಪಿಕ್ ಸಿದ್ಧತೆಗಳ ಕುರಿತು ಲೇಖನಗಳನ್ನು ಬರೆದಿದ್ದರು.
ಪ್ರಶಸ್ತಿಗಳು ಮತ್ತು ಗೌರವಗಳು: ಟಿಜೆಎಸ್ ಜಾರ್ಜ್ ಅವರಿಗೆ 2011 ರಲ್ಲಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿ, ವಕ್ಕೋಮ್ ಮಾಳವಿ ಸ್ಮಾರಕ ಪ್ರಶಸ್ತಿ (2024), ಕೇಸರಿ ಮಾಧ್ಯಮ ಪ್ರಶಸ್ತಿ (2017), ಕಮಲಾ ಸುಧಾ ಪ್ರಶಸ್ತಿ (2017), ರಾಜ್ಯೋತ್ಸವ ಪ್ರಶಸ್ತಿ (2007), ಮೊಹಮ್ಮದ್ ಕೊಯಾ ಪತ್ರಿಕೋದ್ಯಮ ಪ್ರಶಸ್ತಿ (2005) ಮತ್ತು ಪತ್ರಿಕಾ ಅಕಾಡೆಮಿ ಪ್ರಶಸ್ತಿ (2001) ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.
5kuo00
1dbl1r