ಸಿಎಂ ತವರು ಜಿಲ್ಲೆಯಲ್ಲೇ ಸಮೀಕ್ಷೆಗೆ ಗೈರು: 8 ಸಹ ಶಿಕ್ಷಕರು ಅಮಾನತು

0
32

ಮೈಸೂರು: ಜಿಲ್ಲೆಯಲ್ಲಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಗಣತಿ ಕಾರ್ಯಕ್ಕೆ ಹಾಜರಾಗದ 8 ಮಂದಿ ಸಹ ಶಿಕ್ಷಕರನ್ನು ಅಮಾನತುಗೊಳಿಸಿರುವ ಘಟನೆ ಸಿಎಂ ತರವು ಜಿಲ್ಲೆಯಲ್ಲಿ ನಡೆದಿದೆ.

ಇವರು ಅಧಿಕಾರಿಗಳ ದೂರವಾಣಿ ಕೆರೆಯನ್ನು ಸ್ವೀಕರಿಸದೇ ಬೇಜವಾಬ್ದಾರಿ ಹಾಗೂ ಅತೀವ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಸ್.ಟಿ. ಜವರೇಗೌಡ ಅಮಾನತುಗೊಳಿಸಿದ್ದಾರೆ.

ಅಮಾನತುಗೊಂಡವರು: ಕೆಸರೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೆಸರೆ, ರಾಜೇಂದ್ರ ನಗರದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆ, ಜಾಕಿ ಕ್ವಾಟ್ರಸ್‌ನ ಆದರ್ಶ ವಿದ್ಯಾಲಯ, ಹುಣಸೂರು ತಾಲೂಕಿನ ಕರಿಗೌಡರ ಬೀದಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಬಿ.ಬಿ. ಗಾರ್ಡನ್‌ನ ಶಾರದಾ ಪ್ರೌಢಶಾಲೆ, ಹುಣಸೂರು ತಾಲೂಕಿನ ಮರುಳಯ್ಯನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಣಸೂರು ತಾಲೂಕಿನ ಗುರುಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಹ ಶಿಕ್ಷಕರೇ ಅಮಾನತುಗೊಂಡವರಾಗಿದ್ದಾರೆ.

Previous articleನಾನು – ನನ್ನ ಕುಟುಂಬದವರು ಯಾವ ಮಾಹಿತಿ ನೀಡುವುದಿಲ್ಲ
Next articleಕೊಯ್ನಾ ಡ್ಯಾಮ್ ನೀರು ಬಿಡುಗಡೆ: ಕೃಷ್ಣಾ ಬ್ಯಾರೇಜ್ ಮುಳುಗಡೆ

LEAVE A REPLY

Please enter your comment!
Please enter your name here