ಯಾದಗಿರಿ: ಮಳೆಗೆ ಬೆಳೆ ಹಾನಿ – ಸಚಿವ ಶರಣಬಸಪ್ಪ ದರ್ಶನಾಪುರ ಮನವಿಗೆ – ಸಿಎಂ  ಸ್ಪಂದನೆ

0
13

ಯಾದಗಿರಿ: ಸತತ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾದ ಮತ್ತು ತುಂಬಿ ಹರಿಯುತ್ತಿರುವ ನದಿ, ಹಳ್ಳಗಳ ಸ್ಥಳಗಳನ್ನು ಭಾನುವಾರ ವಿಕ್ಷಣೆ ಮಾಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ನಾಯ್ಕಲ್ ಬಳಿ ಬೆಳೆ ಹಾನಿಗೊಳಗಾದ ರೈತರ ಅಳಲನ್ನು ಆಲಿಸಿ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮೂಲಕ ಮಾತಾನಾಡಿ, ಗಿರಿಜಿಲ್ಲೆಯಲ್ಲಿ ವರಣ ಅರ್ಭಟ್ ಜೋರಾದ ಪರಿಣಾಮ ಸಾಕಷ್ಟು ಹಾನಿಯಾಗಿದ್ದು ಕೂಡಲೇ ತಾವು ಭೇಟಿ ನೀಡಬೇಕು ಮತ್ತು ಹೆಚ್ಚಿನ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಕೂಡಲೇ ಸ್ಪಂಧಿಸಿದ ಸಿಎಂ ಅವರು, ನಾಳೆನೇ ನಾನಾಗಲಿ ಅಥವಾ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಅವರಾಗಲಿ ಇಬ್ಬರಲ್ಲಿ‌ ಒಬ್ಬರು ಜಿಲ್ಲೆಗೆ ಭೇಟಿ ನೀಡುವುದಾಗಿ ಸಚಿವರಿಗೆ ಭರವಸೆ ನೀಡಿದರು. ಬೆಳೆ ಹಾನಿ ಸೇರಿದಂತೆಯೇ ಸಮಗ್ರ ಮಾಹಿತಿಯನ್ನು ಸಚಿವರು ಸಿಎಂ ಅವರಿಗೇ ನೀಡಿದರು. ಈ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ್, ಡಿಸಿ ಹರ್ಷಲ್ ಬೋಯರ್ ಸೇರಿದಂತೆಯೇ ಇತರರಿದ್ದರು.

Previous articleಕರೂರು ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್
Next articleಕರೂರ್ ಕಾಲ್ತುಳಿತ ದುರಂತ: ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಪ್ರಧಾನಿ

LEAVE A REPLY

Please enter your comment!
Please enter your name here