ಸುಳ್ಯದಲ್ಲಿ ಮತ್ತೆ ಮಳೆ ಅಬ್ಬರ: ರಸ್ತೆಯಲ್ಲಿ ತುಂಬಿ ಹರಿದ ಮಳೆ ನೀರು

0
6

ಸುಳ್ಯ: ಸುಳ್ಯ ತಾಲೂಕಿನಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಸುಳ್ಯದ ಪ್ರಮುಖ ರಸ್ತೆಯಲ್ಲಿ ನೀರು ತುಂಬಿ ಹರಿದಿದೆ. ಶುಕ್ರವಾರ ಮತ್ತು ಶನಿವಾರ ಸುರಿದ ಭಾರಿ ಮಳೆಗೆ ಚರಂಡಿಯ ಅವ್ಯವಸ್ಥೆಯಿಂದ ಸುಳ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ತುಂಬಿ ಹರಿದಿದೆ.

ಜಟ್ಟಿಪಳ್ಳ ತಿರುವಿನಲ್ಲಿ ಭಾರೀ ಪ್ರಮಾಣದಲ್ಲಿ ತಗ್ಗು ಪ್ರದೇಶಕ್ಕೆ ನುಗ್ಗಿ ರಸ್ತೆಯಲ್ಲಾ ಮುಳುಗಡೆಯಾಯಿತು. ಇದರಿಂದಾಗಿ ವಾಹನ ಸವಾರರು ಪರದಾಡುವಂತೆ ಆಯಿತು. ಶುಕ್ರವಾರ ಸಂಜೆಯಿಂದ ಸುರಿಯಲು ಆರಂಭಿಸಿದ ವರುಣ ಶನಿವಾರ ದಿನಪೂರ್ತಿ ಅಬ್ಬರಿಸಿದೆ.

ಗಾಳಿ ಮಳೆಗೆ ತಾಲೂಕಿನ ಕೆಲವು ಭಾಗದಲ್ಲಿ ವಿದ್ಯುತ್ ಕಂಬಕ್ಕೆ ತೆಂಗಿನ ಮರ, ಅಡಿಕೆ ಮರ, ರಬ್ಬರ್ ಸೇರಿ ಕೃಷಿ ಹಾನಿ ಸಂಭವಿಸಿದೆ. ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಹಳ್ಳ, ಕೊಳ್ಳಗಳು, ನದಿಗಳು ತುಂಬಿ ಹರಿಯುತಿದೆ.

Previous articleಲಡಾಖ್‌: ಸೋನಂಗೆ ಪಾಕಿಸ್ತಾನ ಸಂಪರ್ಕ – ಡಿಜಿಪಿ ಆರೋಪ
Next articleಕೊಪ್ಪಳ: ಬೆಂಬಲ ಬೆಲೆ ಘೋಷಣೆ, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

LEAVE A REPLY

Please enter your comment!
Please enter your name here