ಮುಂಡಗೋಡ: ಬಂಧನದ ಭೀತಿಯಿಂದ ಮುಂಡಗೋಡದ ಸಬ್ ರಜಿಸ್ಟ್ರಾರ್ ಕಚೇರಿ ಬುಧವಾರ ಇಡೀ ದಿನ ಬಂದ್ ಆದ ಘಟನೆ ನಡೆದಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿ ದೀಪಾ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಆಪರೇಟರ್ ದೇವರಾಜ ಮತ್ತು ಹೇಮಾ ಅವರು ಕಚೇರಿಗೆ ಬರದೆ ಇರುವ ಹಿನ್ನೆಲೆಯಲ್ಲಿ ಸಬ್ ರಜಿಸ್ಟ್ರಾರ್ ಕಚೇರಿ ಬಾಗಿಲಿಗೆ ಬೀಗ ಜಡೆಯಲಾಗಿದೆ.
ಯೂಟ್ಯೂಬರ್ ಮುಕಳೆಪ್ಪನ ಪತ್ನಿಯ ತಾಯಿ ಶಿವಕ್ಕ ಜಾಲಿಹಾಳ ಅವರು 7ಜನ ಆರೋಪಿಗಳಾದ ಮುಕಳೆಪ್ಪ ಉರ್ಪ್ ಖ್ವಾಜಾ ಬಂದೆನವಾಜ್, ಮುಂಡಗೋಡ ಗಾಂಧಿನಗರದ ಮೈಬೂಬಸಾಬ್ ಕಮಡೊಳ್ಳಿ, ಹೆಬ್ಬಳ್ಳಿಯ ಅಮ್ಜದಲಿ ಶಿರಹಟ್ಟಿ, ಹಾವನೂರನ ಕಾವೇರಿ ಹೊಸಮನಿ, ಮುಂಡಗೋಡ ಸಬ್ ರಜಿಸ್ಟ್ರಾರ ಅಧಿಕಾರಿ ದೀಪಾ ಕರಮಡ್ಡಿ, ಸಬ್ ರಜಿಸ್ಟ್ರಾರ್ ಕಚೇರಿಯ ಕಂಪ್ಯೂಟರ್ ಆಪರೇಟರ್ ದೇವರಾಜ್ ಮತ್ತು ಹೇಮಾ ಇವರು ಸೇರಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ತನ್ನ ಮಗಳಾದ ಗಾಯತ್ರಿ ಯಲ್ಲಪ್ಪ ಜಾಲಿಹಾಳ ಅವಳನ್ನು ಒಂದನೇ ಆರೋಪಿಯಾದ ಮುಕಳೆಪ್ಪ ಅಲಿಯಾಸ್ ಖ್ವಾಜಾ ಬಂದೆನವಾಜ್ ಅವನೊಂದಿಗೆ ಮುಂಡಗೋಡ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದಾರೆ.
ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ತಮ್ಮನ್ನು ಬಂಧಿಸುತ್ತಾರೆ ಎಂಬ ಭೀತಿಯಿಂದ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿ ದೀಪಾ ಮತ್ತು ಅಲ್ಲಿಯ ಕಂಪ್ಯೂಟರ್ ಆಪರೇಟರ್ ದೇವರಾಜ ಮತ್ತು ಹೇಮಾ ಅವರು ಕಚೇರಿಗೆ ಬಂದಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.