ಮಂಗಳೂರು: ಸ್ಥಳೀಯ ಕಾರ್ಮಿಕರಿಗೆ ಕೆಲಸ ನಿರಾಕರಣೆ – ಪ್ರತಿಭಟನೆ

0
25

ಮಂಗಳೂರು: ಹಳೆ ಬಂದರು ಸಗಟು ಮಾರುಕಟ್ಟೆಯ ಪಂಚಮಹಲ್ ವಾಸುದೇವ ಕಾಮತ್ ಎಂಬ ಕಂಪೆನಿಯಲ್ಲಿ ದುಡಿಯುತ್ತಿರುವ ಆರು ಮಂದಿ ಹಮಾಲಿ ಕಾರ್ಮಿಕರನ್ನು ಸಕಾರಣ ಇಲ್ಲದೆ ಸ್ಥಳೀಯ ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವ ಕ್ರಮವನ್ನು ಖಂಡಿಸಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆ ಯಲ್ಲಿ ಪ್ರತಿಭಟನೆ ನಡೆಯಿತು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಾ ಉತ್ತರ ಭಾರತೀಯ ಕಾರ್ಮಿಕರನ್ನು ಕಡಿಮೆ ಸಂಬಳಕ್ಕೆ ದುಡಿಸುವ ಉದ್ದೇಶದಿಂದ 40 ವರ್ಷಗಳಿಂದ ಕೆಲಸ ಮಾಡಿದ ಸ್ಥಳೀಯ ಕಾರ್ಮಿಕರಿಗೆ ಕನಿಷ್ಠ ಸೇವಾ ಪರಿಹಾರ ನೀಡದೆ ಅನ್ಯಾಯ ಮಾಡಲಾಗಿದೆ.

ಕಾರ್ಮಿಕರಿಗಾಗಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಕಾರ್ಮಿಕರಿಗೆ ನ್ಯಾಯ ಸಿಗದೇ ಹೋದಲ್ಲಿ ಸಗಟು ಮಾರುಕಟ್ಟೆಯ ಎಲ್ಲಾ ಹಮಾಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಅನನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್. ಸಂಘದ ಪ್ರಧಾನ ಕಾರ್ಯದರ್ಶಿ ಫಾರೂಕ್ ಉಳ್ಳಾಲಬೈಲ್, ಕೋಶಾಧಿಕಾರಿ ಶಮೀರ್ ಬೋಳಿಯಾರ್, ಪ್ರಮುಖರಾದ ಲೋಕೇಶ್ ಶೆಟ್ಟಿ, ಮಜೀದ್ ಉಳ್ಳಾಲ, ಹರೀಶ್ ಕೆರೆಬೈಲ್, ಮೋಹನ ಕುಂಪಲ, ಪಿ.ಟಿ ಮೊಹಮ್ಮದ್, ಸಿದ್ದಿಕ್ ಬೆಂಗರೆ, ಬಷೀರ್ ಹರೇಕಲ, ಪ್ರಭಾಕರ, ಅನಿಲ್, ಶರಣಪ್ಪ, ಹಂಝ, ಮಾಧವ ಕಾವೂರು ಮುಂತಾದವರು ಉಪಸ್ಥಿತರಿದ್ದರು

Previous articleBigg Boss Kannada 12: ಬಿಗ್‌ ಬಾಸ್‌ ಆರಂಭಕ್ಕೆ ದಿನಗಣನೆ ಶುರು
Next articleಮೇಘನಾ ಪಾಲಿಗೆ ಧ್ರುವ ʻದೇವರು ಕೊಟ್ಟ ತಮ್ಮʼ: ಅತ್ತಿಗೆ ಬಗ್ಗೆ ಆಕ್ಷನ್‌ ಪ್ರಿನ್ಸ್‌ನ ಮನಮಿಡಿಯುವ ಮಾತುಗಳು!

LEAVE A REPLY

Please enter your comment!
Please enter your name here