ರೈಲ್ವೆ ನೌಕರರಿಗೆ ಗುಡ್‌ ನ್ಯೂಸ್ – ಬೋನಸ್ ಬಿಡುಗಡೆಗೆ ಸಂಪುಟ ಅಸ್ತು

0
79

ನವದೆಹಲಿ: ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ 10.91 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಶುಭ ಸುದ್ದಿ ಲಭಿಸಿದೆ. ಕೇಂದ್ರ ಸಚಿವ ಸಂಪುಟವು 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ (PLB) ಪಾವತಿಗೆ ಅನುಮೋದನೆ ನೀಡಿದೆ. ಈ ಬೋನಸ್ ಮೊತ್ತ ₹1,865.68 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಚಿವರ ಪ್ರಕಾರ, ರೈಲ್ವೆ ನೌಕರರ ಅಹೋರಾತ್ರಿ ಪರಿಶ್ರಮದ ಫಲವಾಗಿ ರೈಲ್ವೆ ವಲಯವು ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿದೆ. ವಿಶೇಷವಾಗಿ ಸರಕು ಸಾಗಣೆ, ಪ್ರಯಾಣಿಕರ ಸೇವೆ ಹಾಗೂ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿನ ಸಾಧನೆಗೆ ನೌಕರರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು 78 ದಿನಗಳ PLB ಬೋನಸ್ ನೀಡಲು ತೀರ್ಮಾನಿಸಿದೆ.

ಬೋನಸ್ ಪ್ರಯೋಜನ ಪಡೆಯುವವರು ಒಟ್ಟು 10.91 ಲಕ್ಷ ರೈಲ್ವೆ ನೌಕರರು. ಗ್ಯಾಜೆಟೆಡ್ ಅಧಿಕಾರಿಗಳು (Group A & B) ಹೊರತುಪಡಿಸಿ ಎಲ್ಲಾ ಗುಂಪು C ಮತ್ತು D ನೌಕರರು. ಟ್ರ್ಯಾಕ್‌ಮೆನ್, ತಂತ್ರಜ್ಞರು, ಪಾಯಿಂಟ್‌ಸ್ಮೆನ್, ಕ್ಲೀನರ್‌ಗಳು, ಗಾರ್ಡ್‌ಗಳು, ಲೊಕೋ ಪೈಲಟ್‌ಗಳು ಸೇರಿದಂತೆ ರೈಲ್ವೆ ವ್ಯವಸ್ಥೆಯನ್ನು ನೇರವಾಗಿ ಚಲಾಯಿಸುವ ಎಲ್ಲಾ ಸಿಬ್ಬಂದಿ.

78 ದಿನಗಳು ಬೋನಸ್‌ನ ಒಟ್ಟು ಮೊತ್ತ: ₹1,865.68 ಕೋಟಿ ಆಗಿದ್ದು ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ನೌಕರರ ಕೈಗೆ ಬೋನಸ್ ಹಣ ಬೀಳಲಿದೆ. “ರೈಲ್ವೆ ನೌಕರರ ಪರಿಶ್ರಮದಿಂದಲೇ ರೈಲ್ವೆ ಇಲಾಖೆಯು ದೇಶದ ಆರ್ಥಿಕ ಚಟುವಟಿಕೆಯಲ್ಲಿ ನಿರಂತರವಾಗಿ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರವು ಅವರ ಸೇವೆಯನ್ನು ಗೌರವಿಸುವುದರ ಭಾಗವಾಗಿ ಬೋನಸ್‌ನ್ನು ಅನುಮೋದಿಸಿದೆ.”

Previous articleಕರ್ನಾಟಕ: ಮುದ್ರಾಂಕ ತೆರಿಗೆ ಸಂಗ್ರಹ ಕುಸಿತ
Next articleಕೆಪಿಸಿಎಲ್ ಶಿಶಿಕ್ಷು ತರಬೇತಿ, ಶಿಷ್ಯ ವೇತನ 10,000 ರೂ.ಗಳು

LEAVE A REPLY

Please enter your comment!
Please enter your name here